Wednesday, October 9, 2024

1. ಪ್ರಾರ್ಥನೆ | Prayer


*ಅಸ್ಸಲಾಮು ಅ'ಲೈಕುಮ್ ವ ರಹ್ಮತುಲ್ಲಾಹಿ ವ ಬರಕಾತುಹು*

ಓ ಅಲ್ಲಾಹನೇ, ನೀನೊಬ್ಬನೇ ಶಾಶ್ವತನು, ಮತ್ತೆಲ್ಲವೂ ನಶ್ವರ. ನಿನ್ನಲ್ಲಿಯೇ ಪ್ರಾರ್ಥಿಸುವೆವು, ನಿನ್ನಲಿಯೇ ಕೇಳಿಕೊಳ್ಳುವೆವು, ದಯಮಾಡಿ ನಮಗೆ ಸರಿಯಾದ ಹಾದಿಯಲ್ಲಿ ನಡೆಸು, ನಮ್ಮನ್ನು ಕೆಟ್ಟ ದಾರಿಯ ಸಮೀಪವೂ ಹಾಯಿಸಬೇಡ. ನಮ್ಮನ್ನು ಎಲ್ಲ ರೀತಿಯ ದುರ್ಗುಣಗಳಿಂದ ಉಳಿಸಿ, ಸದಾಚಾರದ ಪಥದ ಮೇಲೆ ಇರಿಸು. ಸದಾ ನಿನ್ನ ಧ್ಯಾನದಲ್ಲಿ ಲೀನವಾಗಿರುವಂತೆ ಮಾಡು. ಸದಾ ನಿನ್ನ ದಾಸನಾಗಿ ನಿನ್ನ ಸೇವೆ ಮಾಡುವಂತವನಾಗಿ ಮಾಡು.  ಆಮೀನ್