(ಸ.ಅ)
ಆಹಾರ ರುಚಿ ಸಾಕಾಗುವುದಿಲ್ಲವೇ
ಹಸಿದ ಹೊಟ್ಟೆಗೆ ಕಲ್ಲು ಕಟ್ಟಿ ಬದುಕಿದ ವಿಶ್ವನಾಯಕನ
ನೆನಪಿಸು...
ಅಂದ ಚೆಂದದ ಬೆಲೆ ಬಾಳುವ ಉಡುಪು ಕೊರತೆಯೇ
ಎರಡು ತುಂಡು ಬಟ್ಟೆ ಬಿಟ್ಟು ಹೋದ ವಿಶ್ವನಾಯಕನ ನೆನಪಿಸು..
ಮಲಗಲು ಮೆತ್ತನೆ ಹಾಸಿಗೆ ಇಲ್ಲ ಕೊರಗೇ
ಖರ್ಜೂರ ಎಲೆಗಳ ಮೇಲೆ ಮಲಗಿದ ವಿಶ್ವನಾಯಕನ
ಪುಣ್ಯ ದೇಹವ ನೆನಪಿಸು..
ಬಡತನ ಎಂಬ ಚಿಂತೆಯೇ ಬಡವರ ಅತಿ ಹೆಚ್ಚು ಪ್ರೀತಿಸಿ ಬಡವರೊಂದಿಗೆ ಸ್ವರ್ಗದಿ ನಾನಿರುವನೆಂಬ ವಿಶ್ವನಾಯಕನ ಪುಣ್ಯವಚನವ ನೆನಪಿಸು..
ಜಗತ್ತು ನಿನ್ನನ್ನು ದ್ವೇಷಿಸುತ್ತಿದೆ ಎಂಬ ವಿಷಾದವೇ
ದ್ವೇಷಿಸಿದ ಜಗತ್ತಿಗಾಗಿ ದೇವನಲ್ಲಿ ಪ್ರಾರ್ಥಿಸಿದ ವಿಶ್ವನಾಯಕನ ನೆನಪಿಸು.
✒ಜಲೀಲ್ ಮುಕ್ರಿ
No comments:
Post a Comment