Monday, December 26, 2016

ಪರಿಚಯ

ದೀಪ ಮತಾಡುವದಿಲ್ಲ ಅದರ ಬೆಳಕು ದೀಪದ ಪರಿಚಯ ನೀಡುತ್ತೆ ...
ಅದೆ ಥರ ನೀವು ನಿಮ್ಮ ಬಗ್ಗೆ ಏನು ಹೇಳಬೇಡಿ .....
ಒಳ್ಳೆಯ ಕೆಲಸ ಮಾಡ್ತಾ ಇರಿ
ಸಾಕು ಅದೆ ನಿಮ್ಮ ಪರಿಚಯ ನೀಡುತ್ತೆ .....

Thursday, October 20, 2016

ಒಂದು ಸಣ್ಣ ಕಥೆ

ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...

ಮಂತ್ರಿ ಹೇಳಿದ 'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ..... '

ಇದನ್ನು ಅರ್ಥ ಮಾಡಿಕೊಂಡು ತಲೆದೂಗಿದ ರಾಜ, ಆನೆಯ ಬಳಿ ಹೋಗಿ ಹಣೆಗೊಂದು ಮುತ್ತನಿತ್ತ .. ಪ್ರೀತಿಯಿಂದ ಹಿರಿ ಸಲಗದ ಮೈದಡವಿದ.

ಒಂದು ಸಣ್ಣ ಒಳ್ಳೆಯ ಮಾತು, ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು ....

ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.😊

Sunday, October 16, 2016

ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ

🌸🌸 *ತಪ್ಪದೆ ಓದಿ ನಿಮ್ಮ ವ್ಯಕ್ತಿತ್ವ ವಿಕಾಸನಕ್ಕಾಗಿ*🌸🌸

🌺 *ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ:~* 🌺
(ವ್ಯಕ್ತಿತ್ವ ವಿಕಸನಕ್ಕಾಗಿ)

ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ.

ಮಾರ್ಗ ಮದ್ಯೆ ರಾಜ ಎಡವಿ ಬೀಳ್ತಾನೆ.ಎಡಗಾಲಿನ ಹೆಬ್ಬೆರಳ ಉಗುರು ಕಿತ್ತು ರಕ್ತ ಸುರಿಯೋಕೆ ಶುರುವಾಗುತ್ತೆ .

ರಾಜ ಮಂತ್ರಿಯನ್ನು ಕರೆದು ನೋವಿನಿಂದ
ತನಗಾದ ಸ್ಥಿತಿಯನ್ನು ತೋರಿಸುತ್ತಾನೆ.

ಮಂತ್ರಿ ಏನು ಆಗಿಯೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸುತ್ತ

ಬನ್ನಿ  ಪ್ರಭುಗಳೇ  "ಆಗೋದೆಲ್ಲ ಒಳ್ಳೆಯದಕ್ಕೆ" ಅಂತ ಹೇಳ್ತಾನೆ.!!

ರಾಜ ಕೆಂಡಾಮಂಡಲನಾಗಿ ..
ನಾನು ರಾಜ
ನನ್ನ ಕಾಲು  ಕಿತ್ತು
ರಕ್ತ ಸುರಿದರೆ,
ಒಳ್ಳೆಯದಕ್ಕೆ ಅಂತಿಯಾ? ನನ್ನ ಅನ್ನ ತಿಂದು.

ನಿನ್ನಂತ ಮಂತ್ರಿಯ ಅವಶ್ಯಕತೆ ನನಗಿಲ್ಲ ಎಂದು ಅಲ್ಲೇ ಪಕ್ಕದಲ್ಲ್ಲಿದ್ದ ಹಾಳು ಬಾವಿಗೆ  ಆತನನ್ನು ತಳ್ಳಿ ಮುಂದಕ್ಕೆ ಸಾಗುತ್ತಾನೆ.!!

ಕೆಲವೇ ಪರ್ಲಾಂಗು ತಲುಪುವಷ್ಟರಲ್ಲಿ ಕಾಡಿನ ಜನರ ಗುಂಪೊಂದು  ರಾಜನನ್ನು  ಸುತ್ತುವರೆದು ಹೊತ್ತೊಯ್ಯುತ್ತಾರೆ.

ಆ ದಿನ ಕಾಡಿನ ದೇವಿಯ ಉತ್ಸವ ಇದ್ದು ದೇವಿಗೆ ನರಬಲಿ ಕೊಡಲು ಮನುಷ್ಯರನ್ನು ಹುಡುಕಿಕೊಂಡು ಬಂದಿದ್ದ ಕಾಡಿನ ಜನಗಳ ಕೈಗೆ ಒಂಟಿಯಾಗಿದ್ದ ರಾಜ ಅನಾಯಾಸವಾಗಿ ಸಿಕ್ಕಿ ಬಿಟ್ಟಿದ್ದ .!!

ಸರಿ
ಬಲಿ ಪೂಜೆ ಮಾಡಿ ಇನ್ನೇನು ರಾಜನನ್ನು ಕಡಿಯಬೇಕು
ಕತ್ತಿ  ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ  ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್ನು ಬಿಟ್ಟು ಕಳುಹಿಸುತ್ತಾರೆ .

ಖುಷಿ ಇಂದ ಬದುಕಿದೆಯಾ ಬಡ ಜೀವವೇ ಎಂದು ಹಿಂತಿರುಗಿ ಬರುವಾಗ ಮಂತ್ರಿ ಹೇಳಿದ ಮಾತು ನೆನಪಾಗುತ್ತೆ.

ಹೌದು ಗಾಯ ಆಗಿದ್ದು ಒಳ್ಳೆಯದೇ ಆಯಿತು
ಇಲ್ಲ ಅಂದಿದ್ರೆ ನನ್ನನ್ನು  ಕತ್ತರಿಸಿ ಬಿಡುತ್ತಿದ್ದರು. ಎಂದು ತಿಳಿದು ಮಂತ್ರಿಯ ರಕ್ಷಣೆಗೆ ಧಾವಿಸುತ್ತಾನೆ.ಮತ್ತು ಮಂತ್ರಿಯನ್ನು ಹಾಳು ಬಾವಿಯಿಂದ ಮೇಲಕ್ಕೆತ್ತಿ ನಡೆದ ಘಟನೆ ವಿವರಿಸಿ  ದಯವಿಟ್ಟು ನನ್ನನ್ನು ಕ್ಷಮಿಸಿ ಮಂತ್ರಿಗಳೇ ಎಂದು ವಿನಮ್ರವಾಗಿ ಕ್ಷಮೆ ಯಾಚಿಸುತ್ತಾನೆ .

ಮಂತ್ರಿ ಸಮಾಧಾನ ಚಿತ್ತದಿಂದ ಅಯ್ಯೋ ಅದಕ್ಕೇಕೆ ಕ್ಷಮೆ ಪ್ರಭುಗಳೇ "ಆಗೋದೆಲ್ಲ ಒಳ್ಳೇದಕ್ಕೆ" ನೀವು ನನ್ನನ್ನು ಹಾಳು ಬಾವಿಗೆ ತಳ್ಳಿದ್ದು ಕೂಡ ಒಳ್ಳೆಯದಕ್ಕೆ ಎನ್ನುತ್ತಾನೆ .

ರಾಜ ಆಶ್ಚರ್ಯದಿಂದ ಮಂತ್ರಿ ಕಡೆ ನೋಡುತ್ತಾನೆ .

ಮಂತ್ರಿ ಮಾತು ಮುಂದುವರೆಸಿ
" ಪ್ರಭುಗಳೇ  ನೀವು ನನ್ನನ್ನು ಇಲ್ಲಿ ತಳ್ಳಿದ್ದಕ್ಕೆ ನಾನು ನಿಮ್ಮ ಜೊತೆ ಬರಲಾಗಲಿಲ್ಲ
ನಾನು ನಿಮ್ಮ ಜೊತೆ ಬಂದಿದ್ದರೆ  ಗಾಯವಾದ ನಿಮ್ಮನ್ನು ಬಿಟ್ಟು ಏನು ಆಗದ ನನ್ನನ್ನು ಬಲಿ ಕೊಡುತ್ತಿದ್ದರು ."

ನಾನು ಸಂತೋಷವಾಗಿದ್ದೇನೆ,  ಹಾಗೆಯೇ ಇರುತ್ತೇನೆ ಕಾರಣ 
ನಾನು ಪ್ರತಿ ಕ್ಷಣ
ಪ್ರತಿ ಸೋಲು
ಪ್ರತಿ ಅಪಘಾತ
ಪ್ರತಿ ಎಡವು
ಪ್ರತಿ ಅವಮಾನ
ಪ್ರತಿ ಆಘಾತಗಳಲ್ಲಿಯೂ ಯೋಚಿಸುವುದು ಇದನ್ನೇ .
ಎಲ್ಲಿಯೋ ಮುಂದಾಗಬಹುದಿದ್ದ ದೊಡ್ಡ ಅಪಘಾತ ತಡೆಯಲು ಇದಾಗಿರಬಹುದು ಎಂದು .....ಮಿಕ್ಕಿದ್ದು ನಿಮ್ಮಿಚ್ಚೆ.

ಧನಾತ್ಮಕ ಮನೋಭಾವನೆ ಎಂದರೆ ಇದೇ ಅಲ್ವಾ?

*ಬನ್ನಿ ಸ್ನೇಹಿತರೆ,*
*ಧನಾತ್ಮಕತೆಯ ಧನಿಕರಾಗೋಣ.* 👍😊😊😊

Wednesday, September 14, 2016

ಜೀವನದಲ್ಲಿ ಅಳವಡಿಸಲೇ ಬೇಕಾದ ಕುರಾನ್ ನಿಂದ ಆಯ್ದ 100 ಹಿತವಚನಗಳು

1. ಸತ್ಯದೊಂದಿಗೆ ಸುಳ್ಳನ್ನು ಸೇರಿಸ ಬೇಡಿ. (2:42)
2. ತಾವು ಸ್ವತಹ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಂಡ ಮೇಲೆ ಇತರರಿಗೆ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳಲು ಹೇಳಿ. (2:44)
3. ಭೂಮಿಯ ಮೇಲೆ ದೂಷಣೆ/ಕ್ಷೋಭೆ ಎಸಗದಿರಿ. (2:60)
4. ಜನರನ್ನು ಪ್ರಾರ್ಥನಾಲಯಗಳಿಂದ ತಡೆಯ ಬೇಡಿ. (2:114)
5. ಯಾರನ್ನು ಹಿಂದುಮುಂದೆ ವಿಚಾರಿಸದೆ ಕಣ್ಣು ಮುಚ್ಚಿ ಅನುಸರಿಸ ಬೇಡಿ. (2:170)
6. ಕೊಟ್ಟ ಮಾತು/ವಾಗ್ದಾನವನ್ನು ಉಲ್ಲಂಘಿಸ ಬೇಡಿ (2:177)
7. ಲಂಚಗಾರಿಕೆಯಲ್ಲಿ ಶಾಮೀಲಾಗ ಬೇಡಿರಿ. (2:188)
8. ನಿಮ್ಮೊಂದಿಗೆ ಸೆಣಸುವವರೊಂದಿಗೆ ಮಾತ್ರ ಹೋರಾಡಿ. (2:190)
9. ಯುದ್ಧದ ಶಿಷ್ಟಾಚಾರ/ನಿಯಮಗಳನ್ನು ಪಾಲಿಸಿ. (2:191)
10. ತಬ್ಬಲಿಗಳನ್ನು ಸಂರಕ್ಷಿಸಿ. (2:220)
11. ಮುಟ್ಟಿನ ಕಾಲಾವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗ ಬೇಡಿ. (2:222)
12. ನಿಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ತಿ ಸ್ತನಪಾನ ಮಾಡಿಸಿ. (2:233)
13. ಆಳುವವರನ್ನು ಅವರ ಅರ್ಹತೆ ಆಧಾರದಲ್ಲೇ ಆರಿಸಿರಿ. (2:247)
14. ಧರ್ಮದಲ್ಲಿ ಯಾವುದೇ ಬಲತ್ಕಾರವಿಲ್ಲ. (2:256)
15. ನೆನಪಿನಲ್ಲಿದ್ದೂ ದಾನಧರ್ಮಗಳನ್ನು ರದ್ದು ಮಾಡ ಬೇಡಿ. (2:264)
16. ಅರ್ಹರನ್ನು ಹುಡುಕಿ ಸಹಾಯ ಒದಗಿಸಿ. (2;273)
17. "ಬಡ್ಡಿ"ಯನ್ನು ಸ್ವೀಕರಿಸ ಬೇಡಿ. (2:275)
18. ಸಾಲ ಪಡೆದವರು ಅಸಹಾಯಕ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಹೆಚ್ಚು ಕಾಲಾವಕಾಶ ಕೊಡಿ. (2:280)
19. ಕೊಟ್ಟ ಸಾಲವನ್ನು ಬರವಣಿಗೆಯಲ್ಲಿ ಇಡಿ. (2:282)
20. ವಿಶ್ವಾಸ/ಭರವಸೆ/ನಂಬಿಗೆ ಇಡಿ. (2:283)
21. ಗೂಢಾಚಾರಿಕೆ/ಬೇಹುಗಾರಿಕೆ ಮತ್ತು ಚಾಡಿ ಹೇಳುವುದು ಮಾಡ ಬೇಡಿ. (2:283)
22. ಎಲ್ಲಾ ಕಾಲದ ಪ್ರವಾದಿಗಳಲ್ಲಿ ವಿಶ್ವಾಸ ಇರಿಸಿ. (2:285)
23. ಒಬ್ಬರನ್ನು ಅವರ ಸಾಮರ್ಥ್ಯಕ್ಕಿಂತ ಅಧಿಕ ಪೀಡಿಸ ಬೇಡಿ. (2:286)
24. ಒಕ್ಕಟ್ಟನ್ನು ಮುರಿದು ಬೇರ್ಪಡ ಬೇಡಿ. (3:103)
25. ಕೋಪ/ಆಕ್ರೋಶವನ್ನು ನಿಗ್ರಹುಸಿ. (3:134)
26. ಮಾತಿನಲ್ಲಿ ಉದ್ಧಟತನ ತೋರದಿರಿ. (3:159)
27. ಈ ಭುವನ ಸೃಷ್ಟಿಯಲ್ಲಿ ಅಡಕವಾಗಿರುವ ವಿಸ್ಮಯಗಳನ್ನು ಆಳವಾಗಿ ಅರಿಯಿರಿ. (3:191)
28. ಪುರುಷರು ಮತ್ತು ಮಹಿಳೆಯರಿಗೂ ಸಮಾನ ಪ್ರತಿಫಲಗಳಿವೆ. (3:195)
29. ಮರಣ ಹೊಂದಿದವರ ಸಂಪತ್ತನ್ನು ಅವರ ಕುಟುಂಬದವರಲ್ಲಿ ಹಂಚಲ್ಪಡ ಬೇಕು. (4:7)
30. ಮಹಿಳೆಗೂ ಪೂರ್ವಜರ ಆಸ್ತಿಯಲ್ಲಿ ಉತ್ತರಧಿಕಾರವಿದೆದೆ. (4:7)
31. ತಬ್ಬಲಿಗಳ ಹಕ್ಕನ್ನು ಕಬಳಿಸ ಬೇಡಿ. (4:10)
32. ತನ್ನ ರಕ್ತ ಸಂಬಂಧಿಗಳನ್ನು ವರಿಸ ಬೇಡಿ. (4:23)
33. ಬೇರೆಯವರ ಸ್ವತ್ತನ್ನು ಅನ್ಯಾಯವಾಗಿ ಕಬಳಿಸ ಬೇಡಿ. (4:29)
34. ಪುರುಷನು ಕುಟುಂಬದ ಯಜಮಾನನು. (4:34)
35. ಪರರೊಂದಿಗೆ ಎಂದೂ ಹಿತವಂತರಾಗಿರಿ. (4:36)
36. ಜಿಪುಣರಾಗ ಬೇಡಿ. (4:37)
37. ಹೊಟ್ಟೆಕಿಚ್ಚು ಪಡಬೇಡಿ. (4:54)
38. ಜನರ ನಡುವೆ ನ್ಯಾಯವಂತಿಕೆಯಿಂದ ನಿರ್ಣಯ ಕೊಡಿ. (4:58)
39. ಒಬ್ಬರನ್ನೊಬ್ಬರು ಕೊಲ್ಲ ಬೇಡಿ. (4:92)
40. ಮೋಸ/ವಂಚನೆಯ ವಕಾಲತ್ತು ವಹಿಸ ಬೇಡಿ. (4:105)
41. ನ್ಯಾಯದಲ್ಲಿ ಧೃಢವಾಗಿ ನಿಲ್ಲಿ. (4:135)
42. ಒಳಿತಿನಲ್ಲಿ ಒಬ್ಬರಿಗೊಬ್ಬರು ಸಹಕರಿಸಿ. (5:2)
43. ಪಾಪ/ಕಳಂಕ/ದುಶ್ಕರ್ಮ ಮತ್ತು ಆಕ್ರಮಣಗಳಲ್ಲಿ ಸಹಕರಿಸದಿರಿ. (5:2)
44. ಮೃತ ಪ್ರಾಣಿಗಳು, ರಕ್ತ ಮತ್ತು ಹಂದಿ ಮಾಂಸ ನಿಷಿದ್ಧಗೊಳಿಸಲಾಗಿದೆ. (5:3)
45. ನ್ಯಾಯವನ್ನು ಪ್ರತಿಪಾದಿಸಿ. (5:8)
46. ಪಾಠದಾಯಕವಾಗಿರುವಂತೆ ಅಪರಾಧಿಗಳನ್ನು ಶಿಕ್ಷಿಸಿ. (5:38)
47. ಪಾಪ ಕೃತ್ಯ ಮತ್ತು ಅನ್ಯಾಯದ ವಿರುದ್ಧ ಸದಾ ಹೋರಾಡಿ. (5:63)
48. ಶರಾಬು ಮತ್ತು ಅಮಲು ಬರಿಸುವ ವಸ್ತುಗಳನ್ನು ವರ್ಜಿಸಿ. (5:90)
49. ಜೂಜಾಡ ಬೇಡಿ. (5:90)
50. ಬೇರೆಯವರ ದೇವರನ್ನು ತೆಗಳ/ಹೀಯಾಳಿಸ ಬೇಡಿ. (6:108)
51. ಒಂದು ವಿಷಯದಲ್ಲಿ ಬಹುಸಂಖ್ಯಾತರಾಗಿರುವುದು ಸತ್ಯಕ್ಕೆ ಪುರಾವೆ/ಧೃಡೀಕರಣ ಅಲ್ಲ. (6:116)
52. ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸಿ ಜನರನ್ನು ವಂಚಿಸದಿರಿ. (6:152)
53. ಅಹಂಕಾರಿಗಳಾಗಿ ಇರ ಬೇಡಿ. (7:13)
54. ತಿನ್ನಿರಿ, ಕುಡಿಯಿರಿ ಆದರೆ ದುಂದುಗಾರಿಕೆ ಎಸೆಯದಿರಿ. (7:31)
55. ಪ್ರಾರ್ಥನೆಯ ವೇಳೆಯಲ್ಲಿ ಒಳ್ಳೆಯ ಶುಭ್ರ ಬಟ್ಟೆಗಳನ್ನು ಉಡಿರಿ. (7:31)
56. ಇತರರ ತಪ್ಪುಗಳನ್ನು ಕ್ಷಮಿಸಿ/ಮನ್ನಿಸಿರಿ. (7:199)
57. ಯುದ್ಧಗಳಲ್ಲಿ ಬೆನ್ನು ತೋರಿಸುವ ಹೇಡಿಗಳಾಗದಿರಿ. (8:15)
58. ಸಹಾಯ ಯಾಚಿಸಿದವರಿಗೆ ಸಹಾಯ ಮಾಡಿ ಅವರನ್ನು ಸಂರಕ್ಷಿಸಿರಿ. (9:6)
59. ಶುಚಿತ್ವ/ಸ್ವಚ್ಛತೆ ಪಾಲಿಸಿ. (9:108)
60. ಅಲ್ಲಾಹನ ಕೃಪೆಯಿಂದ ಎಂದೂ ನಿರಾಶರಾಗದಿರಿ. (12:87)
61. ತಿಳುವಳಿಕೆಯ ಕೊರತೆಯಿಂದ ಮಾಡಿದ ತಪ್ಪನ್ನು ಅಲ್ಲಾಹನು ಕ್ಷಮಿಸುವನು. (16:119)
62. ದೇವಮಾರ್ಗದ ಆಮಂತ್ರಣವನ್ನು ಒಳ್ಳೆಯ ಬೋಧನೆ ಮತ್ತು ಜಾಣತನದಿಂದ ಮಾಡಿ. (16:125)
63. ಒಬ್ಬರ ಪಾಪದ ಬಾಧ್ಯತೆ ಇನ್ನೊಬ್ಬರಿಗಿಲ್ಲ. (17:15)
64. ಪೋಷಕ/ಮಾತಾಪಿತರೊಂದಿಗೆ ಕರ್ತವ್ಯತತ್ಪರರಾಗಿರಿ. (17:23)
65. ಮಾತಾ ಪಿತರೊಂದಿಗೆ ಎಂದೂ ಅಗೌರವ/ಅವಮಾನದ ವರ್ತನೆ ತೋರದಿರಿ. (17:23)
66. ಎಂದೂ ಹಣದ ದುಂದು ವೆಚ್ಚ ಮಾಡ ಬೇಡಿ. (17:29)
67. ಬಡತನದ ಭಯದಿಂದ ಎಂದೂ ತನ್ನ ಮಕ್ಕಳನ್ನು ಕೊಲ್ಲ ಬೇಡಿ. (17:31)
68. ಎಂದೂ ವ್ಯಭಿಚಾರದತ್ತ ಸುಳಿಯ ಬೇಡಿ. (17:32)
69. ಎಂದೂ ತನಗೆ ತಿಳಿಯದಿರುವ ವಿಷಯದ ಕುರಿತು ಬೆನ್ನು ಹತ್ತಿ ಹೋಗ ಬೇಡಿ. (17:36)
70. ಎಂದೂ ಜನರೊಂದಿಗೆ ಸೌಮ್ಯತೆಯಿಂದ ಮಾತನಾಡಿ. (20:44)
71. ಹುರುಳಿಲ್ಲದ/ನಿರರ್ಥಕ/ನಿಶ್ಪ್ರಯೋಜಕ/ಪೊಳ್ಳು ವಿಷಯಗಳಿಂದ ದೂರ ಇರಿ. (23:3)
72. ಅನುಮತಿ ಇಲ್ಲದೇ ಇತರರ ಮನೆಗಳನ್ನು ಪ್ರವೇಶಿಸ ಬೇಡಿ. (24:27)
73. ಯಾರು ಕೇವಲ ಅಲ್ಲಾಹನಲ್ಲಿ ರಕ್ಷಣೆ ಯಾಚಿಸುತ್ತಾರೋ ಅಲ್ಲಾಹನು ಅವರಿಗೆ ರಕ್ಷಣೆಯನ್ನೀಯುವನು. (24:55)
74. ಎಂದೂ ಪೋಷಕರ ಕೊಠಡಿಯನ್ನು ಅವರ ಅನುಮತಿ ಪಡೆಯದೇ ಪ್ರವೇಶಿಸ ಬೇಡಿ. (24:58)
75. ಭೂಮಿಯಲ್ಲಿ ನಮ್ರತೆಯಿಂದ ನಡೆದಾಡಿ. (25:63
76. ಈ ಭೂಮಿಯಲ್ಲಿ ನಿಮ್ಮ ಪಾಲನ್ನು ಉಪೇಕ್ಷಿಸ ಬೇಡಿ. (28:77)
77. ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿಸದಿರಿ. (28:88)
78. ಸಲಿಂಗ ಕಾಮದಲ್ಲಿ ತೊಡಗ ಬೇಡಿ. (29:29)
79. ಸರಿಯನ್ನು ಪ್ರತಿಪಾದಿಸಿ, ತಪ್ಪನ್ನು ನಿಷೇಧಿಸಿ. (31:17)
80. ಭೂಮಿಯಲ್ಲಿ ದರ್ಪದಿಂದ ನಡೆದಾಡದಿರಿ. (31:18)
81. ಧ್ವನಿಯನ್ನು ತಗ್ಗಿಸಿ ಮಾತನಾಡಿ. (31:19)
82. ಮಹಿಳೆಯರು ತಮ್ಮ ಶೃಂಗಾರವನ್ನು ಪ್ರಕಟಿಸ/ತೋರ್ಪಡಿಸಬಾರದು. (33:33)
83. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ. (39:53)
84. ಅಲ್ಲಾಹನ ಕರುಣೆಯಿಂದ ಎದೆಗುಂದದಿರಿ. (39:53)
85. ಕೆಡುಕನ್ನು ಒಳಿತಿನ ಮೂಲಕ ಹೆಮ್ಮೆಟ್ಟಿಸಿ. (41:34)
86. ವಿಷಯ/ಸಂಗತಿಗಳನ್ನು ಜನರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸಿ. (42:38)
87. ಜನರ ಮಧ್ಯೆ ವಿಷಯಗಳನ್ನು ಇತ್ಯರ್ಥ ಗೊಳಿಸಲು ಪ್ರಯತ್ನಿಸಿ. (49:9)
88. ಇತರರನ್ನು ಮೂದಲಿಸಿ ಅಪಹಾಸ್ಯ ಗೈಯದಿರಿ. (49:11)
89. ಅನುಮಾನ/ಸಂದೇಹಗಳನ್ನು ನಿವಾರಿಸಿ. (49:12)
90. ಬೇಹುಗಾರಿಕೆ ಮತ್ತು ಚಾಡಿ ಮಾಡದಿರಿ. (49:12)
91. ನಿಮ್ಮಲ್ಲಿ ಅತೀ ಧರ್ಮಶೀಲನಾಗಿರುವವನೇ ಅತೀ ಉತ್ತಮನು. (49:13)
92. ಅತಿಥಿಗಳನ್ನು ಗೌರವಿಸಿ. (51:26)
93. ಸಂಪತ್ತನ್ನು ದಾನದಲ್ಲಿ ವ್ಯಯಿಸಿ. (57:7)
94. ಯಾವುದೇ ಸನ್ಯಾಸತ್ವವು ಧರ್ಮವಲ್ಲ. (57:27)
95. ಸತ್ಯ ವಿಶ್ವಾಸ ಮತ್ತು ಜ್ನಾನವುಳ್ಳವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು. (58:11)
96. ಮುಸ್ಲಿಮೇತರರನ್ನು ಕರುಣೆ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಿ. (60:8)
97. ಮನಸ್ಸಿನ ಸಂಕುಚಿತತೆಯಿಂದ ಸುರಕ್ಷಿತರಾಗಿರುವವರು ಮಾತ್ರ ಎಶಸ್ವಿಗಳು. (64:16)
98. ಅಲ್ಲಾಹನಿಂದ ಕ್ಷಮೆ ಕೋರಿ, ಅವನು ಕ್ಷಮಿಸುವವನು ಮತ್ತು ಕರುಣಾಮಯಿ ಆಗಿದ್ದಾನೆ. (73:20)
99. ಪ್ರಶ್ನಿಸುವವರನ್ನು/ಕೇಳುವವರನ್ನು ಹಿಮ್ಮೆಟ್ಟಿಸ ಬೇಡಿ. (93:10)
100. ಬಡವರಿಗೆ ಉಣಿಸುವವರನ್ನು ಹುರಿದಿಂಬಿಸಿ. (107:3)

Friday, August 26, 2016

ಮುತ್ತಿನಂಥ ಮಾತುಗಳು

*💖ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ*.

*💖ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ*.

*💖ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ*.

*💖ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ*.

*💖ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು*.

*💖ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ*.

*💖ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ*.

*💖ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ*.

*💖ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ*.

*💖ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ*.

*💖ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು*.

*💖ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ*.

*💖ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*.

*💖ಮನೆ ಬಿಟ್ಟು ಹೊರಡುವ ಮುನ್ನ ಮನದೊಳಗಿನ ಮಾತನ್ನೊಮ್ಮೆ ಆಲಿಸಿ*.

Tuesday, June 21, 2016

ಒಬ್ಬಳು ಆ೦ಗ್ಲ ಯುವತಿಯೂ ಇಸ್ಲಾಮ್ ಸ್ವೀಕರಿಸಲು ಕಾರಣವಾದ ಸ೦ಭವದ ಕುರಿತು ಅವರು ಬರೆದರು


ನನ್ನ ಕಾಲೇಜಿನಲ್ಲಿ ಎಲ್ಲಾ ಹುಡುಗಿಯರಿಗಿ೦ತಲೂ ಸು೦ದರಿಯಾದ ಹೆಣ್ಣು ನಾನಾಗಿದ್ದೆ. ನಾನು ಕ್ಯಾ೦ಪಸನ್ನ ಪ್ರವೇಶಿಸಿದರೆ  ಗ೦ಡು ಹುಡುಗರ ನೋಟ ನನ್ನ ಮೇಲಾಗಿತ್ತು..... ನನ್ನಲ್ಲಿ ಗೆಳೆತನವನ್ನು ಬಯಸಿ ಹಲವರು ನನ್ನ ಸಮೀಪಿಸುವರು. ಅವರೆಲ್ಲರ ಪ್ರೇಮಭ್ಯರ್ಥನೆಯನ್ನು ನಾನು ನಿರಾಕರಿಸಿದೆ. ನನ್ನ ಸೌ೦ಧರ್ಯದ ಕುರಿತು ನಾನು ಜಾಗರೂಕಲಾಗಿದ್ದೆ. ಅದುದರಿ೦ದ ನಾನು ಆ ವಿಷಯದಲ್ಲಿ ಸ್ವಲ್ಪ ಅಹ೦ಕಾರಿ ಕೂಡ ಆಗಿದ್ದೆ.

ಆದರೆ ನನ್ನ ಆ ಅಹ೦ ಅನ್ನು ಒ೦ದು ದಿನ ಕೈ ಬಿಡಬೇಕಾಗಿ ಬ೦ತು. ಕಾಲೇಜಿನ ಮೇಲಿನ ಅ೦ತಸ್ಥಿನತ್ತ ತೆರಳಲು ಲಿಪ್ಟ್ ಹತ್ತಿದಾಗ ಒ೦ದು ಗು೦ಪು ಹುಡುಗರು ಎ೦ದಿನ೦ತೆ ನನ್ನನ್ನು ದಿಟ್ಟಿಸುತ್ತಿದ್ದಾರೆ. ಲಿಪ್ಟ್ ಮೇಲೇಲಾರ೦ಭಿಸಿದಾಗಲಾಗಿತ್ತು ನಾನು ಗಮನಿಸಿದ್ದು ಅದರಲ್ಲಿ ಒಬ್ಬರು ಮಾತ್ರ ನನ್ನನ್ನು ಗಮನಿಸುತ್ತಿಲ್ಲ.... ಅವರ ನೋಟವು ಕೆಳಗಡೆಯಾಗಿತ್ತು . ಗಡ್ಡವನ್ನು ಬಿಟ್ಟಿದ್ದರು. ವಸ್ತ್ರಧಾರಣೆಯನ್ನು ಅದೇನೋ  ವ್ಯತ್ಯಾಸ. ತುಟಿಗಳು ಅದೇನನ್ನೋ ಮ೦ತ್ರಿಸುತ್ತಿದ್ದವು.

ಅವರ ಶ್ರದ್ದೆಯನ್ನು ನನ್ನತ್ತ ಕೇ೦ದ್ರೀಕರಿಸಲು ನಾನು ಹಲವು ವಿಧದಲ್ಲಿ ಪ್ರಯತ್ನಪಟ್ಟೆ ಆದರೆ ಅವರು ನನ್ನ ಕಡೆ ಗಮನವನ್ನೇ ಕೊಡಲಿಲ್ಲ. ಅವರ ಸಮೀಪದಲ್ಲಿ ಹೋಗಿ ನಿ೦ತೆ ಆದರೂ ಅವರು ಕ್ಯಾರೆ ಅನ್ನಲಿಲ್ಲ. ಅಸ್ವಸ್ಥಗೊ೦ಡ ಮನಸ್ಸಿನೊ೦ದಿಗೆ ನಾನು ಲಿಪ್ಟ್'ನಿ೦ದಿಳಿದೆ.... ಅಧ್ಯಾಕೆ ನನ್ನ ಸೌ೦ಧರ್ಯಕ್ಕೆ  ಅವರನ್ನು ಆಕರ್ಷಿಸಲು ಸಾಧ್ಯವಾಗದೇ ಹೋಯಿತು.... ಇವರ ಕುರಿತು ನಾನು ಅರಿಯತೊಡಗಿದೆ. ದಿವಸಗಳ ನಿರೀಕ್ಷಣೆಯಲ್ಲಿ ಅವರು ವ್ಯತ್ಯಾಸ್ಥರಾಗಿ ಕ೦ಡರು...

ಆ ಕ್ಯಾ೦ಪಸ್ಸಿನಲ್ಲಿ ಯಾರಲ್ಲೂ ಮಾತನಾಡಲು ನಾನು ಹಿ೦ಜರಿಯುತ್ತಿರಲಿಲ್ಲ ಕಾರಣ ಅವರೆಲ್ಲ ನನ್ನ ಜೊತೆ ಮಾತನಾಡಲು ಆಗ್ರಹ ಹೊ೦ದಿದವರಾಗಿದ್ದರು. ನಾನು ಮಾತನಾಡಲು ಕಾಯುತ್ತಿದ್ದವರು.  ಆದರೆ ಆ ಮನುಷ್ಯನಲ್ಲಿ ಮಾತನಾಡಲು ನನ್ನ ಹೃದಯಕ್ಕೆ ದೈರ್ಯ ಸಾಕಾಗುತ್ತಿರಲಿಲ್ಲ. ಒ೦ದು ದಿನ ದೈರ್ಯವನ್ನೆಲ್ಲಾ ಕೂಡಿಸಿಕೊ೦ಡು ನಾನು ಅವರ ಹತ್ತಿರ ಹೋದೆ.

ನಾನು ಕೇಳಿದೆ ಈ ಕ್ಯಾ೦ಪಸ್ಸಿನಲ್ಲಿ ಬಹಳಷ್ಟು ಯುವಕರಿದ್ದಾರೆ. ನಾನು ಯಾರನೆಲ್ಲಾ ನನ್ನ ಆಕರ್ಷಣಾ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದೇನೋ ಅದೆಲ್ಲವೂ ನನ್ನಿ೦ದ ಸಾಧ್ಯವಾಗಿದೆ. ಆದರೆ ಕೆಳೆದ ಕೆಲವು ದಿವಸಗಳಿ೦ದ ನಿಮ್ಮ ಒ೦ದು ನೋಟವನ್ನುಗಳಿಸಲಿಕ್ಕಾಗಿ ನಾನು ನಿಮ್ಮ ಹಿ೦ದೆ ಸುತ್ತುತ್ತಿದ್ದೇನೆ. ನನಗದು ಸಾಧ್ಯವಾಗುತ್ತಿಲ್ಲ...... ಅದೇನು ಇಷ್ಟು ಉತ್ತಮವಾದ ಇಷ್ಟೋ೦ದು ನಿಯ೦ತ್ರಣವಿರುವ ಒ೦ದು ಜೀವನವನ್ನು ನಡೆಸಲು ನಿಮಗೆ ಸಹಕಾರಿಯಾಗಿರುವುದು.?

ಆ ಯುವತಿಯು ಬರೆಯುತ್ತಾಳೆ ಆ ಯುವಕನ ಉತ್ತರವನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ *I AM A TRUE FOLLOWERS OF MUHAMMED* *ನಾನು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಯಾಧಾರ್ಥ ಸ್ನೇಹಿಯಾಗಿರುವೆನೆ೦ದು* 

*ಏನು ಮುಹಮ್ಮದಾ?* ನಾನು ಕೇಳಿದ್ದೇನೆ ಆ ಹೆಸರು ಹಲವಾರು   ಮಾಧ್ಯಮಗಳಲ್ಲಿ. *ಸ್ತ್ರೀ ಲ೦ಪಟನಾಗಿಯೂ, ತಲವಾರಿನ ಪ್ರತೀಕವಾಗಿ, ಕಾಮಪಿಶಾಚಿಯೆ೦ದೂ ಮೀಡಿಯಾಗಳು ಚಿತ್ರೀಕರಿಸುತ್ತಿರುವ ಮುಹಮ್ಮದರ ಕುರಿತು ನಾನು ಕೇಳಿದ್ದೇನೆ*

*ಆದರೆ ಇ೦ತಹ ಉನ್ನತರಾದ ಹೃದಯದಲ್ಲಿ ಹಿಡಿತವಿರುವ ಮನಸ್ಸುಗಳ ಯಜಮಾನರಾದ ಯುವಕರನ್ನು ತಯಾರಾಗಿಸಿದ ಆ ಮಹಾ ಚೈತನ್ಯರಾದ ಮುಹಮ್ಮದರ ಕುರಿತು ನಾನು ಕಲಿತಿರಲಿಲ್ಲ* *ಚರಿತ್ರೆಗಳಲ್ಲಿ ನಾನು ಓದಲಿಲ್ಲ.... ನಾನು ತೀರ್ಮಾನಿಸಿದೆ ನನಗೆ ಕಲಿಯಬೇಕು. ಆ ಮುಹಮ್ಮದರ
ಕುರಿತು. ಹೀಗೆ ಮುಹಮ್ಮದರ ಚರಿತ್ರೆಯನ್ನು ನಾನು ಓದತೊಡಗಿದೆ...*

*ಒ೦ದೋ೦ದು ದಿನಗಳು ಕಳೆಯುವಾಗಲೂ ನಾನು ಈ ಪ್ರಪ೦ಚದಲ್ಲಿ ಅತ್ಯಧಿಕವಾಗಿ ಪ್ರೀತಿಸುವ ಬಹುಮಾನಿಸುವ ಆಧರಿಸುವ ಒ೦ದು ವ್ಯಕ್ತಿತ್ವವಾಗಿ ಮುಹಮ್ಮದರು ಬದಲಾಗತೊಡಗಿದರು....* ಆ ಪ್ರವಾದಿಯ ಚರಿತ್ರೆಯನ್ನು ಓದಿ ಮುಗಿಸಿದ ನಾನು ಆ ಯುವಕನ ಹತ್ತಿರ ತೆರಳಿ ಹೇಳಿದೆ. *ನಾನೂ   ಆಗಬೇಕು ಮುಹಮ್ಮದ್ ನೆಬಿಯವರ ಅನುಯಾಯಿ.*

ಆ ಯುವಕನು ಹೇಳಿಕೊಟ್ಟ *ಅಸ್'ಹದು ಅನ್'ಲಾಹಿಲಾಹ ಹಿಲ್ಲಲ್ಲಾ ವ ಅಸ್'ಹದು ಅನ್ನಹಃ ಮುಹಮ್ಮದನ್ ರಸೂಲುಲ್ಲಾಹ*
****************************

ನಮ್ಮಲ್ಲಿ ಅದೆಷ್ಟು ಜನರಿಗೆ ಹೇಳಲು ಸಾಧ್ಯವಾಗಬಹುದು  ನಾನು *ಮುಹಮ್ಮದ್ ಸಲ್ಲಲ್ಲಾಹು ಅಲೈವಸಲ್ಲಮರನ್ನು ಪ್ರೀತಿಸುವ ಯಾಧಾರ್ಥ ಪ್ರವಾದಿ ಪ್ರೇಮಿಯಾದ ಅನುಯಾಯಿ ಎ೦ದು*

*ಈ ಪ್ರಪ೦ಚದಲ್ಲಿ ಯಾರಿ೦ದಲೂ ಸಾಧ್ಯವಾಗಲ್ಲ ಆ ಪ್ರವಾದಿಯನ್ನು ಕೀಳಾಗಿ ಚಿತ್ರೀಕರಿಸಲು*

*ಯಾರಿ೦ದಲೂ ಸಾಧ್ಯವಾಗಲ್ಲ ಆ ಪ್ರವಾದಿಯ ವ್ಯಕ್ತಿತ್ವಕ್ಕೆ ಮಸಿಬಳಿಯಲು*

*ಯಾರಿ೦ದಲೂ ಸಾಧ್ಯವಾಗಲ್ಲ ಆ ಪ್ರವಾದಿಯನ್ನು ಭಯೋತ್ಪಾಧಕನೆ೦ದು ಸಾಭೀತುಪಡಿಸಲು*

*ಯಾರಿ೦ದಲೂ ಸಾಧ್ಯವಾಗಲ್ಲ ಆ ಪ್ರವಾದಿಯನ್ನು ಸ್ತ್ರೀಲ೦ಪಟನೆನ್ನಲೂ*

*ಯಾರಿಗೂ ಸಾಧ್ಯವಾಗಲ್ಲ ನನ್ನ ಪ್ರವಾದಿಯವರು ಹಣಕ್ಕಾಗಿಯೂ, ಅಧಿಕಾರಕ್ಕಾಗಿಯೂ, ಸ್ತ್ರೀಗಳಿಗಾಗಿಯೂ, ಸ್ವಾಧೀನಕ್ಕಾಗಿಯೂ ಕಪಟವಾದ ಪ್ರವಾದಿತ್ವವನ್ನು ಅವಕಾಶಪಟ್ಟ೦ತಹ ವ್ಯಕ್ತಿಯಾಗಿದ್ದಾರೆ೦ದು ಚರಿತ್ರೆಯ ಆಧಾರಗಳಿ೦ದ ಸಾಕ್ಷಿಗಳ ಸಮೇತ ಉತ್ತರಿಸುತ್ತಾ ನಿರೂಪಿಸಲು ಈ ಭೂಲೋಕದಲ್ಲಿ ಒಬ್ಬನೇ ಒಬ್ಬನಿ೦ದಲೂ ಸಾಧ್ಯವಾಗಲ್ಲ.*

*ಹೀಗಿದ್ದೂ ನಮ್ಮ ಹತ್ತಿರವಿರುವ ಮಾಣಿಕ್ಯದ ಬೆಲೆಯನ್ನು ನಾವು ಅರಿಯದೆ ಹೋಗುವೆವು.*

*ಈ ಪ್ರಪ೦ಚಕ್ಕೇ ಅನುಗ್ರಹವಾಗಿ ಬ೦ದ ಮಾನವರಾಶಿಗೆ ಕರುಣೆಯ ಪ್ರತೀಕಾರವಾಗಿ ಉದಯಿಸಿದ ಆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಶಪಾಹತ್ ಲಭಿಸುವವರ ಸಾಲಿನಲ್ಲಿ ಅಲ್ಲಾಹನು ನಮ್ಮೆಲ್ಲರನ್ನೂ ಸೇರ್ಪಡಿಸಲಿ.... ಆಮೀನ್ ಯಾ ರಬ್ಬಲ್ ಅಲಮೀನ್*

*ಕನ್ನಡಕ್ಕೆ*
✍🏼 *ಹಸ್ನಾಮೋಳ್.ಕೆ.ಸಿ.ನಗರ.*

Thursday, April 7, 2016

ದೋಣಿ ಸಾಗಲಿ, ಮುಂದೆ ಹೋಗಲಿ


ಶೀರ್ಷಿಕೆ : ದೋಣಿ ಸಾಗಲಿ, ಮುಂದೆ ಹೋಗಲಿ
ಕವಿ : ಕುವೆಂಪು
ಪ್ರಾಕಾರ : ಭಾವಗೀತೆ
ಭಾಷೆ : ಕನ್ನಡ

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ    ||ದೋಣಿ ಸಾಗಲಿ||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ    ||ದೋಣಿ ಸಾಗಲಿ||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿ
ರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ    ||ದೋಣಿ ಸಾಗಲಿ||

ಮಾನವ ಮೂಳೆ ಮಾಂಸದ ತಡಿಕೆ

ಮಾನವ ದೇಹವು ಮೂಳೆ ಮಾಂಸದ ತಡಿಕೆ
ಮಾನವ ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊದಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ

ಮಾನವ ಮೂಳೆ ಮಾಂಸದ ತಡಿಕೆ

ನವ ಮಾಸಗಳು ಹೊಲಸಲಿ ಕಳೆದು
ನವ ರಂಧ್ರಗಳಾ ತಳೆದು ಬೆಳೆದು
ಬಂದಿದೆ ಬುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂದೆ



ಮಾನವ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ



ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಘಳಿಗೆ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ

ಮಾನವ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರಿ ಕತ್ತಲೆ

ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾಡಬೇಕು

ಮಾನವ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ

Friday, February 26, 2016

ದೇವರ ಆಶೀರ್ವಾದವಾಗಿ ಬೆಳೆಯುವುದೇ ಮರ್ಮ

ಸತ್ಯ ಕೆ ಸಾಟಿಯಿಲ್ಲ, ಮಿಥ್ಯಕ್ಕೆ ಕೊನೆಯಿಲ್ಲ, ಅರಿವಿಗೆ ಜ್ಞಾನವಿಲ್ಲ
ಸುಖಕ್ಕೆ ಅನಂತವಿಲ್ಲ, ಕಷ್ಟಗಳಿಗೆ ಅಂತ್ಯವಿಲ್ಲ, ಇವೆರಡಿಲ್ಲದೆ ಜೀವನವಿಲ್ಲ

ಜ್ಞಾನವೇ ಅರಿವಾಗಿ, ಕರ್ಮಕ್ಕೆ ನಾಂದಿಯಾಗಿ, ಮಾಡಿದಾಗ ಸುಕರ್ಮ
ಕರ್ಮವೇ ಮಾದರಿಯಾಗಿ, ಪ್ರಾಮಾಣಿಕತೆ ಉತ್ಕೃಷ್ಟವಾಗಿ, ಮಾಡೋದೇ ಧರ್ಮ 
ಹೊಸಬೆಳಕಿನ ಹಾಡಾಗಿ, ಜನರ ನಿರೀಕ್ಷೆಯಾಗಿ, ದೇವರ ಆಶೀರ್ವಾದವಾಗಿ ಬೆಳೆಯುವುದೇ ಮರ್ಮ

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ, ಪಯಣಿಗರು ನಾವೆಲ್ಲಾ
ಆಸೆಗಳ ಈ ಲೋಕದಲ್ಲಿ, ನಿರಾಸೆಗಳ ನಾವು ಮರೆತಲ್ಲಿ, ಜೀವನವೇ ಸುಖ ಪಯಣ ನಮಗೆಲ್ಲಾ!!!

ಜೀವನದ ಈ ದೋಣಿ ಸುಖವಾಗಿ ಸಾಗಲಿ ಅಂತ ಬಯಸುತ್ತಾ
ಎಲ್ಲರಿಗೂ ಇಂದು ಜಯಂತಿಯ ಹಾರ್ದಿಕ ಶುಭಾಶಯಗಳು