Tuesday, October 24, 2017

ಹೃದಯಾಳದಿಂದ ಓದಿರಿ ಜೀವನದಲ್ಲಿ ಅಳವಡಿಸಿರಿ..

ಹಳೆಯ ಬಟ್ಟೆಧರಿಸಿಕೊಂಡ ಓರ್ವ ವಯೋವೃದ್ದ ರೈಲುಗಾಡಿಯ ಎ.ಸಿ. ಭೋಗಿಯಲ್ಲಿ ಯಾತ್ರೆ ಮಾಡುತ್ತಿದ್ದರು.
ಟಿಕೆಟ್ ಪರಿಶೋದಕನು ( ಟಿ. ಟಿ. ಇ ) ಅವರ ಹತ್ತಿರ ಹೋಗಿ ಟಿಕೆಟ್ ಕೇಳಿದರು.
ವೃದ್ದನು ತನ್ನ ಬ್ಯಾಗಿನಲ್ಲಿ ಟಿಕೇಟ್ ಹುಡುಕಲು ಆರಂಭಿಸಿದರು.

"ಇಲ್ಲಿ ಎಲ್ಲಿಯೋ ಕಾಣಬೇಕು."

ವೃದ್ಧ ಟಿಕೇಟ್ ಹುಡುಕುವುದರ ಮಧ್ಯೆ ಅತೃಪ್ತಿಯೊಂದಿಗೆ ಟಿ.ಸಿ.ಇ ಹೇಳಿದನು.

"ನಾನು ಮರಳಿ ಬರುವಾಗ ತಾವು ಟಿಕೆಟ್ ತೋರಿಸಬೇಕು."

ವೃದ್ಧನು ಟಿಕೆಟ್ ಇಲ್ಲದೆ ಯಾತ್ರೆ ಮಾಡುತ್ತಿರುವುದೆಂದು  ಪರಿಶೋಧಕ ಊಹಿಸಿದನು.
ಅಲ್ಪ ಸಮಯ ಕಳೆದು ಆಗಮಿಸಿದ ಪರಿಶೋಧಕನಿಗೆ ವೃದ್ಧನು ತನ್ನ ಎ.ಸಿ. ಕ್ಲಾಸ್ ಟಿಕೆಟ್ ತೋರಿಸಿದರು.
ಟಿಕೇಟ್ ಪರಿಶೋಧಕನಿಗೆ ತನ್ನ ಊಹೆಯ ಬಗ್ಗೆ ತಪ್ಪಿನ ಅರಿವಾಯಿತು.

"ಒಂದೇ ನೋಟದಲ್ಲಿ ನಾನು ಅವರ ವ್ಯಕ್ತಿತ್ವದ ಮೇಲೆ ಬೆಲೆ ಕಟ್ಟಬಾರದಿತ್ತು. ಎಂದು ತನ್ನಲ್ಲಿ ತಾನೇ ಹೇಳಿಕೊಂಡನು."

ರೈಲುಗಾಡಿ ರೈಲ್ವೇ ನಿಲ್ದಾಣ ತಲುಪಿದಾಗ ಆ ವಯೋ ವೃದ್ದರನ್ನು ಹೊರಗೆ ಬರಲು ಪರಿಶೋಧಕನು ಸಹಾಯ ಮಾಡಿದನು.

ತನ್ನಲ್ಲಿದ್ದ ಸಾಮಾನುಗಳನ್ನು ತೆಗೆಯಲು ಒಬ್ಬ ಹೊರೆ ಹೊತ್ತುವ ಕೂಲಿ ಕೆಲಸದವನನ್ನು ವೃದ್ಧನು ಕರೆದನು.

ಕೂಲಿ ಕೆಲಸದವನು ವೃದ್ದನ ಸಾಮಾನುಗಳನ್ನು ಎತ್ತಿದನಾದರೂ, ಕೂಡಲೇ ಅವೆಲ್ಲವನ್ನೂ ಕೆಳಗಿಟ್ಟು  ಹೋಗಿ, ಅವನು ಮುಂದಿನ ಭೋಗಿಯಲ್ಲಿ ಬಂದು ಇಳಿದ ಒಳ್ಳೆಯ ವಸ್ತ್ರ ಧರಿಸಿದ ಸುಂದರಿಯಾದ ಒಬ್ಬಳು ಯುವತಿಯ ಸಾಮಾನುಗಳನ್ನು ಎತ್ತಿ ತೆಲೆಗಿಟ್ಟು ನಡೆದು ಮುಂದೆಕ್ಕೆ ಸಾಗಿದನು.

ಇದೆಲ್ಲವನ್ನೂ ನೋಡುತಿದ್ದ ಟಿಕೆಟ್ ಪರಿಶೋಧಕ ವೃದ್ಧನ ಸಾಮಾನುಗಳನ್ನು ಸ್ವತಃ ತಾವೇ ಎತ್ತಿಕೊಂಡು ಹೋಗಿ ಒಂದು ಟ್ಯಾಕ್ಸಿಗೆ ತುಂಬಿಸಲು ಸಹಾಯ ಮಾಡಿದನು.
ಪರಿಶೋದಕರೊಂದಿಗೆ ಕೃತಜ್ಞತೆ ಹೇಳಿದ ವೃದ್ಧ ಒಂದು ನೂರು ರೂಪಾಯಿಯು ಕೊಟ್ಟು ಹೇಳಿದರು "ದಯಮಾಡಿ ಇದನ್ನು ಆ ಕೂಲಿಗಾರನಿಗೆ ನೀಡಬೇಕು." ಎಂದರು.
ಇನ್ನು ಮುಂದೆ ಯಾರನ್ನೂ ಅವರ ವೇಷಭೂಷಣ ನೋಡಿ ಬೆಲೆ ಕಲ್ಪಿಸಬಾರದೆಂದು ಕೂಲಿಗಾರನಿಗೆ ಹೇಳಬೇಕು ಎಂದು ಹೇಳಿ ಹೊರಟು ಹೋದರು.

ಅಲ್ಲಿಂದ ಮರಳಿದ ಪರಿಶೋಧಕನು ಕೂಲಿಗಾರನನ್ನು ಕಂಡಾಗ ಅವರ ಹತ್ತಿರ ಹೇಳಿದರು., "ನೀವು ಮಾಡಿದ್ದು ಸರಿಯಲ್ಲ."
ಈ ಹಣ ಅವರು ನಿಮಗೆ ಕೊಟ್ಟಿರುವುದುದಾಗಿದೆ. ವೇಷ ನೋಡಿ ಯಾರಿಗೂ ಬೆಲೆ ಕಲ್ಪಿಸಬಾರದು ಎಂದು ಕೂಡ ನಿಮ್ಮ ಬಳಿ ಹೇಳಲು ಹೇಳಿದ್ದಾರೆ.

"ಕ್ಷಮಿಸಬೇಕು ಸಾರ್"
ಎಂದು ಹೇಳಿ, ಕೂಲಿ ಕೆಲಸದವನು ಹೇಳಿದನು, "ಅವಸರದಿಂದ ನಾನು ಹೇಳಲು ಮರೆತು ಬಿಟ್ಟೆ, ಅವರು ಓರ್ವ ಕಣ್ಣುಕಾಣದ ಕುರುಡಿ ಸ್ತ್ರೀಯಾಗಿದ್ದಾರೆ.
ಪ್ರತಿದಿನ ನಾನು ಅವರ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು. ನಾನು ಅದಕ್ಕೆ ಅವರಿಂದ ಕೂಲಿ ಏನು ತೆಗೆಯುತ್ತಿಲ್ಲ.
ತಾವು ಆ ವೃದ್ಧನನ್ನು ಇನ್ನು ಕಾಣಲು ಸಾದ್ಯವಾಗುವುದಾದರೆ ಅವರ ಹತ್ತಿರ ಹೇಳಬೇಕು, ಯಾರನ್ನು ಒಂದೇ ನೋಟದಲ್ಲಿ ಬೆಲೆ ಕಲ್ಪಿಸಬಾರದು ಎಂದು."

*ನಾವಾಗಿದ್ದೇವೆ ನಿಜಕ್ಕೂ ಸರಿಯಾದವರು ಎಂಬುವುದಾಗಿದೆ ನಮ್ಮೆಲ್ಲರ ಧೋರಣೆ..*

*ಅನಿರೀಕ್ಷಿತವಾಗಿಯೋ ಅಲ್ಲದೆಯೋ ಹಲವು ಬಾರಿ ಹೀಗೆಯೇ‌ ನಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತದೆ..*
*ಆ ಸಮಯದ ಅಹಂಕಾರದಲ್ಲಿ ನಾವು ಹಲವಾರು ಬಾರಿ ಅತಿರೇಕದ ವರ್ತನೆಗಳನ್ನು ತೋರಿಸುತ್ತೇವೆ..*
*ಈ ಅಹಂಕಾರದಿಂದ ನಾವು ಕೆಲವೊಮ್ಮೆ ಇನ್ನೊಬರ ದೋಷವನ್ನು ಹುಡುಕಲು ಶ್ರಮಿಸುತ್ತೇವೆ..*

*ಆದರೆ ನಮಗಿಂತ ದೊಡ್ಡ ಸರಿ ಅವರಾಗಿದ್ದರು ಎಂದು ಮನವರಿಕೆ ಮಾಡುವುದರಲ್ಲಿ ನಾವು ಹಲವು ಬಾರಿ‌ ಎಡವಿಕೊಳ್ಳುತ್ತೇವೆ.*

✍ ಶುಭಚಿಂತಕ

©ಮನಸು ಸುಂದರವಾದರೆ ಕಾಣುವುದೆಲ್ಲವೂ ಸುಂದರವಾಗಿರುವುದು.

ಸ್ನೇಹಿತರೆ ಇದನ್ನು ಓದಿದ ನಂತರ ಇಷ್ಟವಾದರೆ ವರ್ಗಾಯಿಸಿರಿ, ಕಾರಣ ಒಳಿತನ್ನು ತಿಳಿಯಲು ಕಾತರದಿಂದಿರುವ ಸಾವಿರಾರು ಸ್ನೇಹಿತರು ನಮಗೆ ಸುತ್ತಲೂ ಇದ್ದಾರೆ ಎಂಬ ವಿಷಯವನ್ನು ಮರೆಯದಿರಿ..
*ಶುಭವಾಗಲಿ*.

Thursday, April 13, 2017

ಸುಭಾ‌ಷಿತ

🌺 🌱 *ಸುಭಾ‌ಷಿತ* 🌱🌺

*"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ ....*
*ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ...*
*ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ...*
*ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...* 
*ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...*
*ಕೆಳಗೆ ಬೀಳುವಾಗ ಕುಗ್ಗದೆ ...  ಮೇಲೇರುವಾಗ ಹಿಗ್ಗದೆ .... ಸಮಚಿತ್ತದಿ ಬಾಳಿ ಬದುಕುವುದೇ  ಜೀವನ ...*           
   🙏🙏 *ನಮಸ್ಕಾರ* 🙏🙏                                                                                                                                                                🌺🌱 *ಶುಭೋದಯ*🌱🌺