Saturday, August 29, 2015

ಮನೆಗೆ ಬಾರವ್ವ ತಂಗಿ ಮನೀಗೆ ಬಾ..ರ


ನನ್ನಕ್ಕ ನೀ ನನಕಿಂತ ಮೊದಲ್ ಹುಟ್ಟಿ ನನ್ ಭಾಗ್ಯ ಬೆಳಗಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ನನ್ನುಂಡಿ ತಗೊಂಡು, ಅಟ್ಟದ ಮೇಲೆ ಕುಂತ್ಕೊಂಡು, ಎಲ್ಲಾನೂ ನುಂಗಿದ್ದು
ನಾ ನೋಡಿ ಕೇಳಿದಾಗ, ತಿಂದಿಲ್ಲ ಅನ್ಕೋಂತ, ನಕ್ಕೊಂಡು ಓಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಸಾಲೀಗೆ ಹೊರಟಾಗ, ಸಣ್ಣಂಗಿ ಉಟ್ಕೊಂಡಾಗ, ನನ್ನಂಗಿ ಹಿಡಿದೆಳದು ಜೋರಾಗಿ ನಕ್ಕಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಅವ್ವ ಸಿಟ್ಟಾಗಿ ಹೊಡ್ಯಾಕ ಬಂದಾಗ,  ಅಡ್ಡ ಬಂದುಳಿಸಿದ್ದು
ಅಳ್ ಬ್ಯಾಡೋ ತಮ್ಮ ಅಂತ ಕಣ್ಣೊರ್ಸಿ ಚಾಕ್ಲೇಟ್ ತಂದ್ ಕೊಟ್ಟಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಸಾಲ್ಯಾಗ ಹೊಡ್ದಾಡಿ ಬಟ್ಟಿ ಕೆಸರು ಮಾಡ್ಕೊಂಡು ಅಳ್ಕೋಂತ ಬಂದಾಗ ನೀ ಸಮಾಧಾನ ಮಾಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಜಾತ್ರಿಗೆ ಹೋದಾಗ,  ಮಂಗ್ಯಾ ನೋಡಿ ಅಂಜಿದಾಗ, ಇಬ್ಬರೂ ಅವ್ತ್ಕೊಂಡಿದ್ದು
ನಾಟ್ಕನ ನೋಡ್ಕೋಂಡು ಇಬ್ಬರೂ ಕುಣಿದಾಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಹಗಲೂ ರಾತ್ರಿ ಎದ್ದು,  ಕಣ್ಣು ಕೆಂಪು ಮಾಡ್ಕೊಂಡು, ನನ್ಗ ಮಗ್ಗಿ ಕಲಿಸಿದ್ದು
ತಪ್ಪು ಮಾಡಿದಾಗ ತಿಳಿಸಿ ಹೇಳಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಪಿಯುಸಿ ಪಾಸಾದಾಗ ಕ್ಲಾಸಿಗೆ ಫಸ್ಟ್ ಬಂದಾಗ, ನಿನ್ ಕಣ್ಣು ತುಂಬಿ ಬಂದಿದ್ದು
ಓಣ್ಯಾನವರಿಗೆಲ್ಲಾ ಹೋಳಿಗಿ ಮಾಡಿ ತಿನಿಸಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ನನ್ ಭಾಗ್ಯ ಬೆಳಗಲಿ ಅಂತ ದೇವರ ಹತ್ರ ಬೇಡ್ಕೊಂಡು, ವ್ರತ ಎಲ್ಲಾ ಇಟ್ಟಿದ್ದು
ಕೆಲಸ ನನಗೆ ಸಿಕ್ಕಾಗ, ಎಲ್ಲಾರ್ಗೂ ಸಿಹಿ ಹಂಚಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಮದುಮಗಳಾಗಿ ಹೊಸ್ತಿಲು ದಾಟಿ ಹೋಗುವಾಗ, ಹೊಳ್ಳಿ ಬಂದು ತಬ್ಬಿದ್ದು
ನಿನ್ ಬಿಟ್ಟು ಹ್ಯಾಂಗಿರ್ಲ್ಯೋ ತಮ್ಮ ಅಂದಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಬಾರವ್ವ ತಂಗಿ ಮನೀಗೆ ಬಾ,  ನಿನ್ನ ನೆನಪಾಗತೈತಿ ಮನೀಗೆ ಬಾ

Special gift
Dedicated to All sisters
Please accept Zafar's Khayaali Pulaaw

Thursday, August 20, 2015

ಜೀವನದ ಪ್ರಶ್ನೆ ಪತ್ರಿಕೆ

ರಸೂಲುಲ್ಲಾಹ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಕಿಯಾಮತ್ ದಿನದಂದು ಈ ಐದು ಪ್ರಶ್ನೆಗಳನ್ನು ಉತ್ತರಿಸದೇ ಯಾರೂ ಮುಂದೆ ಸರಿಯಲಾರರು..
1. ನಿನ್ನ ಆಯುಶ್ಯ (ಇಡೀ ಜೀವಮಾನ) ವನ್ನು ಹೇಗೆ ಕಳೆದೆ? 
2. ನಿನಗಿರುವ ಜ್ಞಾನದ ಪ್ರಕಾರ ಎಷ್ಟು ಕಾರ್ಯಗಳನ್ನು ಪೂರೈಸಿದೆ? 
3. ಹಣ ಎಲ್ಲಿಂದ ಗಳಿಸಿದೆ? 
4. ಎಲ್ಲಿ ಖರ್ಚು ಮಾಡಿರುವೆ? 
5. ನಿನ್ನ ಶರೀರವನ್ನು ಯಾವ ಕಾರ್ಯಗಳಿಗಾಗಿ ಸವೆಸಿರುವೆ?                                                               -  ತಿರ್ಮಿಜಿ

ಶ್ರೀಮಂತ ಯಾರು....?


ಒಂದು ದಿನ ಒಂದು ತಾಯಿ ಮತ್ತು ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೇ
ಪಕ್ಕದಲ್ಲಿದ್ದ ಒಂದು ದೊಡ್ಡ ಹೋಟೆಲ್ ಗೆ ಹೋಗಿ ಒಂದು
ಲೋಟ ಹಾಲು ಕೊಡಿ ಎಂದು ಕೇಳಿದರು
ಹೋಟೆಲ್ ನವ 100 ರೂಪಾಯಿ ಆಗುತ್ತೆ ಎಂದನು
ಆಯ್ತು ಕೊಡಿ ಎಂದು ದುಡ್ಡು ಕೊಟ್ಟು ಹಾಲು
ತಗೊಂಡರು...
ಇನ್ನೊಂದು ದಿನ ಇದೇ ತಾಯಿ ಹಾಗೂ ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೆ
ಇದ್ದ ಒಂದು ಸಣ್ಣ ಟೀ ಅಂಗಡಿಗೆ ಹೋಗಿ ಒಂದು ಲೋಟ
ಹಾಲು ಕೇಳಿದರು ಆ ಟೀ ಅಂಗಡಿಯವನು ತುಂಬಾ
ಪ್ರೀತಿಯಿಂದ ಹಾಗೂ ವಾತ್ಸಲ್ಯದಿಂದ ಒಂದು ಲೋಟ
ಹಾಲು ಕೊಟ್ಟನು...
ಆ ತಾಯಿ ಹಾಲಿನ ಬೆಲೆ ಎಷ್ಟು ಅಂತ ಕೇಳಿದರು
ಅದಕ್ಕೆ ಅಂಗಡಿಯವನು, ಮಗು ಕುಡಿದ ಹಾಲಿನ ಬೆಲೆ ನನಗೆ
ಬೇಡ,ಮಕ್ಕಳು ಕುಡಿದ ಹಾಲಿನ ದುಡ್ಡು ನಾನು
ತಗೊಳ್ಳಲ್ಲ...ಹಾಗೂ ಇನ್ನು ಮುಂದಿನ ಯಾತ್ರೆ ಗೆ
ಬೇಕಾದರೆ ನೀವು ಹಾಲು ತಗೊಳ್ಬಹುದು...
ಆ ತಾಯಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು
ಹಾಗಾದರೆ ಶ್ರೀಮಂತ ಯಾರು...?
ಒಬ್ಬ ಮನುಷ್ಯನಿಗೆ ಎಷ್ಟು ಸಂಪಾದನೆ ಮಾಡಿದರೆ ಆಸೆ
ಮುಗಿಯಬಹುದು..?
ಯಾರಿಗೆ ಬೇಕಾಗಿ ಇಷ್ಟೆಲ್ಲಾ ಸಂಪಾದನೆ ಮಾಡುತ್ತಾರೆ
...?
ಎಲ್ಲಿಗೆ ತಗೊಂಡು ಹೋಗ್ಲಿಕ್ಕೆ....?
ಸ್ವ ಅವಶ್ಯಕತೆಗಿಂತ ಜಾಸ್ತಿ ಇರುವ ದುಡ್ಡಿಗೆ ಏನು ಬೆಲೆ...?
ಅದರಿಂದ ನೆಮ್ಮದಿ ಇರುತ್ತಾ ...?
ಯಾರೂ ಇಲ್ಲಿ ಬರುವಾಗ ಏನೂ ತಗೊಂಡು ಬಂದಿಲ್ಲ...
ಹೋಗುವಾಗ ಏನೂ ತಗೊಂಡು ಹೋಗುವುದೂ
ಇಲ್ಲ...

ಬನ್ನಿ ನಾವೆಲ್ಲ ಶ್ರೀಮಂತರಾಗೋಣ. ಹಣದ ಶ್ರೀಮಂತಿಕೆ ಕೆಲವರಿಗೆ ಮಾತ್ರ ಸಾಧ್ಯ ಮನದ ಶ್ರೀಮಂತಿಕೆ ಎಲ್ಲರಿಗೂ ಸಾಧ್ಯ. ..ಶುಭೋದಯ