Friday, December 18, 2015

ತುತ್ತು ಅನ್ನ

ಕೈ ಯಿಂದ  ಎಸೆದ ಕಲ್ಲು
ನೂರು ಅಡಿ ಹೋಗಿ ಬೀಳುತ್ತದೆ .

ಬಂದೂಕಿನಿಂದ ಹೊರಟ ಗುಂಡು
ಸಾವಿರ ಅಡಿ ದೂರ ಬೀಳುತ್ತದೆ.

ಪಿರಂಗಿಯಿಂದ ಹೊರಟ ಬೆಂಕಿ ಉಂಡೆ
ಐದು ಕಿಲೋಮೀಟರ್ ದೂರ ಹೋಗುತ್ತದೆ.

ಆದರೆ ಒಬ್ಬ ಬಡವನಿಗೆ ಕೊಟ್ಟ ರೊಟ್ಟಿಯ ತುಂಡು
ಸ್ವರ್ಗದ ಬಾಗಿಲಿನವರೆಗೂ ಹೋಗುತ್ತದೆ...

☝🏻
ಜಾತಿ ಮತ ನೋಡ ಬೇಡಿ
ಬೇದ ಭಾವ ಮಾಡ ಬೇಡಿ
ಹೊಟ್ಟೆ ಹಸಿದು ಬಂದವರಿಗೆ ಒಂದು ತುತ್ತು ಅನ್ನ ಹಾಕಿ!!

Tuesday, December 15, 2015

ಅಂತರಂಗ ಶುದ್ಧಿ

ಸ್ನೇಹಿತರೆ,

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~

ಗುರುಕುಲದಲ್ಲಿ ಓದುತ್ತಿದ್ದ  ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು,
"ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ" ಎಂದು ಹೇಳಿ ಯಾತ್ರೆಗೆ ಅನುಮತಿ ಕೋರಿದರು.

ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು? ಎಂದು ಗುರುಗಳು ತಮ್ಮ ಶಿಷ್ಯರಿಗೆ ಕೇಳಿದರು.

ಇದಕ್ಕೆ ಉತ್ತರಿಸಿದ ಶಿಷ್ಯರು,
"ಗುರುಗಳೇ ನಾವು ಅಂತರಂಗಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

"ಸಂತೋಷ ಹೋಗಿಬನ್ನಿ ಶುಭವಾಗಲಿ" ಎಂದ ಗುರುಗಳು, ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು,
"ಈ ಕಾಯನ್ನೂ ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲ ಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನು ಇಟ್ಟು ಪೂಜೆ ಮಾಡಿಸಿಕೊಂಡು ಬನ್ನಿ" ಎಂದು ತಿಳಿಸಿದರು.

ಸರಿ ಎಂದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟು ಒಂದು ವಾರದ ಬಳಿಕ ಹಿಂತಿರುಗಿದರು.

ಶಿಷ್ಯರನ್ನು ಕಂಡ ಗುರುಗಳು,
"ಏನು ಕ್ಷೇತ್ರ ದರ್ಶನದಿಂದ ನೀವೆಲ್ಲ ಪುನೀತರಾದಿರಾ ನಿಮ್ಮ ಅಂತರಂಗ ಶುದ್ಧಿಯಾಯಿತೇ?" ಎಂದು ಕೇಳಿದರು.

ಎಲ್ಲ ಶಿಷ್ಯರೂ ಒಕ್ಕೊರಲಿನಿಂದ ಹೌದೆಂದರು.
ಆಗ  ಗುರುಗಳು "ನೀವು ಯಾತ್ರೆಗೆ ಹೊರಡುವಾಗ ನಾನು ಕೊಟ್ಟಿದ್ದ ಹಾಗಲಕಾಯಿಗಳಿಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದಿರಾ?, ದೇವರ ಬಳಿ ಇಟ್ಟು ಪೂಜೆ ಮಾಡಿಸಿದಿರಾ?"  ಎಂದು ಕೇಳಿದರು.

ಶಿಷ್ಯರು ಹೌದೆಂದರು.

"ಸರಿ ಹಾಗಾದರೆ ಈ ಕಾಯಿಗಳನ್ನು ಹಾಕಿ ಇಂದು ಅಡುಗೆ ಮಾಡಿಸಿ" ಎಂದು ಅಪ್ಪಣೆ ಕೊಡಿಸಿದರು.

ಊಟಕ್ಕೆ ಕುಳಿತಾಗ ಹಾಗಲ ಕಾಯಿ ತಿಂದ ಗುರುಗಳು,
"ಅಯ್ಯೋ! !!.. ಇದೇನು ಇಷ್ಟು ಕಹಿಯಾಗಿದೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರ ಕೊಟ್ಟ ಶಿಷ್ಯ
"ಅಲ್ಲ ಗುರುಗಳೇ ಹಾಗಲ ಕಾಯಿಯ ಗುಣವೇ ಕಹಿ ಅದು ಸಿಹಿ ಆಗಲು ಹೇಗೆ ಸಾಧ್ಯ?" ಎಂದು ಕೇಳಿದರು.

ಆಗ ಗುರುಗಳು ಹೇಳಿದರು
"ಪವಿತ್ರ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮಾತ್ರಕ್ಕೆ ನಿಮ್ಮ ಅಂತರಂಗಶುದ್ಧಿ ಆಗುವುದಾದರೆ ಈ ಹಾಗಲ ಕಾಯಿಯೂ ನಿಮ್ಮೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತವಾಗಿದೆ. ದೇವರ ದರ್ಶನದಿಂದ ಇದರ ಅಂತರಂಗ ಶುದ್ಧಿ ಆಗಿರಬೇಕಲ್ಲ. ಹಾಗಾದರೆ ಸಿಹಿ ಆಗುವ ಬದಲು ಕಹಿ ಏಕಾಯಿತು?" ಎಂದು ಪ್ರಶ್ನಿಸಿದರು.

ಗುರುಗಳ ಅಂತರ್ಯ ಅರಿತ ಶಿಷ್ಯರು ತಲೆ ತಗ್ಗಿಸಿ ನಿಂತರು.

ಆಗ ಗುರುಗಳು ಹೇಳಿದರು
"ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಬಳಿ ಹೋದರೆ ನೀವು ಪುನೀತರಾಗುವುದಿಲ್ಲ.
ನಿಮ್ಮಲ್ಲಿ ದುರ್ಗುಣ ತುಂಬಿಕೊಂಡು ಪುಣ್ಯ ಸ್ನಾನ ಮಾಡಿದರೆ ನಿಮ್ಮ ಅಂತರಂಗ ಶುದ್ಧಿ ಆಗುವುದಿಲ್ಲ.
ಮೊದಲು ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ.
ಸತ್ಯವನ್ನೇ ನುಡಿಯಿರಿ,
ಧರ್ಮದಿಂದ ನಡೆಯಿರಿ,
ಎಲ್ಲರನ್ನೂ ನಿಮ್ಮಂತೆಯೇ ಕಾಣಿ.
ಮೋಸ, ವಂಚನೆ ಮಾಡಬೇಡಿ, ಜಗತ್ತಿನಲ್ಲಿರುವ ಎಲ್ಲವೂ ನನಗೇ ಬೇಕು ಎಂದು ಕೂಡಿಡುವ ಮನೋಸ್ಥಿತಿ ಬಿಡಿ (ಭ್ರಷ್ಟಾಚಾರ),
ನಿಮ್ಮ ಬದುಕನ್ನು ಪರೋಪಕಾರಕ್ಕೆ ಮೀಸಲಿಡಿ.
ಆಗ ಭಗವಂತನೂ ಮೆಚ್ಚುತ್ತಾನೆ.
ನೀವೂ ಪುನೀತರಾಗುತ್ತೀರಿ" ಎಂದು ಹೇಳಿದರು.

ಈ ಪುಟ್ಟ ಕಥೆ ಎಷ್ಟು ಅರ್ಥಪೂರ್ಣ ಅಲ್ಲವೇ.?

ಯೋಚಿಸೋಣ ಚಿಂತಿಸೋಣ.

"ಮೂರು" ಅಪ್ಪಣೆಗಳು

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು. "ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ,
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
                              ಏನಿದೇ ನನ್ನಲ್ಲಿ ?

ಚಿಂತಿಸುವವನಿಗೆ ದೃಷ್ಟಾಂತವಿದೆ.
💐💐🌹💐💐

ಮನಮುಟ್ಟಿದ ಸಾಲುಗಳು..


1." ನೀವೇನನ್ನು ಬಯಸುತ್ತೀರೋ
ಅದನ್ನು ಪಡೆಯಲಾರಿರಿ. ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ. ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ. ಯಾವುದು ಶಾಶ್ವತವೋ ಅದು ಬೇಸರ.
ಅದೇ ಬದುಕು"...
💭💝🎁😳😔😒😞
2. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು. ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
✋🏻✊🏻👊🏻🙌🏻🚶🏻🏃🏻🙏🏻
3. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ
ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ ನಿಮಗೆ ಅತ್ಯಂತ ಖುಷಿಯೆನಿಸುವದು.
ಅದು ಯಾವುದೆಂದರೆ ಬೇರೆಯವರ
ಕಣ್ಣುಗಳಲಿ ನೀವು ಕಾಣುವ ನಿಮ್ಮ ಬಗೆಗಿನ ಕಾಳಜಿ"...
👩🏼👨🏻👫💞💏💘💑
4. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
💐🐛🐝💕😍😎😃
5. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ ಸಂತೆ.ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
👣👟👞👡👠👢
👤👿🔥🌍🌠⭐
6. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ ತೋರುವ ಯಾರನ್ನು ನೋಯಿಸಬೇಡಿ"...
👦🏻👧🏻👶🏻💓👉🏻💔👋🏻
7. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು ರೂಪಿಸಲಾರದು. ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
🚙🚴🚕🚘🚗🚖🚕
8. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು?
ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ ಸಮಯ ಎಂದಿರುವದಿಲ್ಲ"...

ನೆನಪಿಸು...

(ಸ.ಅ)

ಆಹಾರ ರುಚಿ ಸಾಕಾಗುವುದಿಲ್ಲವೇ
ಹಸಿದ ಹೊಟ್ಟೆಗೆ ಕಲ್ಲು ಕಟ್ಟಿ ಬದುಕಿದ ವಿಶ್ವನಾಯಕನ
ನೆನಪಿಸು...

ಅಂದ ಚೆಂದದ ಬೆಲೆ ಬಾಳುವ ಉಡುಪು ಕೊರತೆಯೇ
ಎರಡು ತುಂಡು ಬಟ್ಟೆ ಬಿಟ್ಟು ಹೋದ ವಿಶ್ವನಾಯಕನ ನೆನಪಿಸು..

ಮಲಗಲು ಮೆತ್ತನೆ ಹಾಸಿಗೆ ಇಲ್ಲ  ಕೊರಗೇ
ಖರ್ಜೂರ ಎಲೆಗಳ ಮೇಲೆ ಮಲಗಿದ ವಿಶ್ವನಾಯಕನ
ಪುಣ್ಯ ದೇಹವ ನೆನಪಿಸು..

ಬಡತನ  ಎಂಬ ಚಿಂತೆಯೇ ಬಡವರ ಅತಿ ಹೆಚ್ಚು ಪ್ರೀತಿಸಿ ಬಡವರೊಂದಿಗೆ ಸ್ವರ್ಗದಿ ನಾನಿರುವನೆಂಬ ವಿಶ್ವನಾಯಕನ ಪುಣ್ಯವಚನವ ನೆನಪಿಸು..

ಜಗತ್ತು ನಿನ್ನನ್ನು ದ್ವೇಷಿಸುತ್ತಿದೆ ಎಂಬ ವಿಷಾದವೇ
ದ್ವೇಷಿಸಿದ ಜಗತ್ತಿಗಾಗಿ ದೇವನಲ್ಲಿ ಪ್ರಾರ್ಥಿಸಿದ ವಿಶ್ವನಾಯಕನ ನೆನಪಿಸು.

✒ಜಲೀಲ್ ಮುಕ್ರಿ

Friday, October 9, 2015

ಮಾನವೀಯತೆಯ ಗುರಿ....

50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು.
ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ.
5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು.
4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿಗೆ ಆ ರೂಮಿನಿಂದ ಹೊರಬಂದರು....
ಹೀಗೆ ಸ್ವಾರ್ಥಿಗಳಾಗಿ ನಾವು
ನಮ್ಮ ಸಂತೋಷವನ್ನು ಹುಡುಕುತ್ತಲೆ ಇರುತ್ತೇವೆ ಆದರೆ ನಮ್ಮ ಸಂತೋಷ ಬೇರೆಯವರಲ್ಲಿ ಬೇರೆಯವರ ಸಂತೋಷ ನಮ್ಮಲ್ಲಿ ಇರುತ್ತದೆ, ನಮ್ಮಲ್ಲಿರುವ ಬೇರೆಯವರ ಸಂತೋಷವನ್ನು ಅವರಿಗೆ ಕೊಟ್ಟರೆ ಅವರಲ್ಲಿರುವ ನಮ್ಮ ಸಂತೋಷವು ನಮಗೆ ಸಿಗುತ್ತದೆ.

ಇದೆ ಮಾನವೀಯತೆಯ ಗುರಿ....🎈🎈🎈🌾😊

Monday, October 5, 2015

ರಸ್ತೆ ಮೇಲೆ ಕಲ್ಲಿನ ಹರಳು

ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊ೦ಡು ನಡಯಬಹುದು. ಆದರೆ ಒಳ್ಳೆಯ ಬೂಟಿನೊಳಗೆ ಒ೦ದೇ ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ. ಹೊರಗಿನ ಸವಾಲುಗಳಿಗಿ೦ತಲೂ ನಾವು ಒಳಗಿನ ದುಬ೯ಲತೆಯಿ೦ದಲೇ ಸೋಲುವುದು ಹೆಚ್ಚು.

Thursday, October 1, 2015

ನೀವೆಷ್ಟು ವಿಶಾಲ ಹೃದಯಿಗಳು!

ಶಾಲೆಯಿಂದ ಮನೆಗೆ ಬಂದ ೪ ವರ್ಷದ ಮಗುವೊಂದು ಊಟ ನಿರಾಕರಿಸಿ ತೆಪ್ಪಗೆ ಕುಳಿತುಬಿಟ್ಟಿತ್ತು. ತಾಯಿ, ಅಜ್ಜಿ, ತಾತ ಯಾರ ಜುಲುಮೆಗೂ ಬಗ್ಗಲಿಲ್ಲ. ಮುದ್ದು ಮಾಡಿದರು, ಚಾಕಲೇಟ್-ಐಸ್ಕ್ರೀಮ್ ನ ಆಮಿಷ ಒಡ್ಡಿದರು, ಗದರಿದರು, ಬುದ್ಧಿ ಹೇಳಿದರು-ಏನೇ ಮಾಡಿದರೂ ಒಂದು ತುತ್ತಿಗೂ ಬಾಯಿ ಬಿಡಲಿಲ್ಲ. ರಾತ್ರಿ ಆಫೀಸಿನಿಂದ ಮರಳಿ ಬಂದ ತಂದೆಗೆ ವರದಿ ಹೋಯಿತು. ಗಾಬರಿಗೊಂಡ ತಂದೆ ಎಲ್ಲ ಕೆಲಸವನ್ನೂ ಬಿಟ್ಟು ಮಗನನ್ನು ತೊಡೆಯ ಮೇಲೆತ್ತಿಕೊಂಡು ಊಟ ಮಾಡದಿರುವುದಕ್ಕೆ ಕಾರಣ ಕೇಳಿದ.

"ನಾನು ಕೇಳಿದ್ದನ್ನು ಒಪ್ಪಿಕೊಂಡರೆ ತಿನ್ನುವೆ."-ಎಂದಿತು ಮಗು.

"ಆಯ್ತು, ನಿನಗೇನು ಬೇಕು ಹೇಳು. ಕೈಲಾದಲ್ಲಿ ಕೊಡಿಸುವೆ. ತೀರ ದುಬಾರಿಯದ್ದು ಕೇಳಿದರೆ ಕೊಡಿಸಲಾರೆ." ಎಂದ ಅಪ್ಪ ಪಟ್ಟು ಬಿಡದೆ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.

ಮಗು ಹೇಳಿತು-"ನೀನು ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆ ಬೋಳಿಸಬೇಕು."

"ಇದೆಂಥ ವಿಲಕ್ಷಣ ಆಸೆ!" ವಿಸ್ಮಿತನಾಗಿ ತಂದೆ ನುಡಿದ. "ಎಷ್ಟು ಅವಲಕ್ಷಣವಾಗಿ ಕಾಣುವೆ ನೀನು ಗೊತ್ತೇ? ಶಾಲೆಯಲ್ಲೂ ಹುಡುಗರು ನಿನ್ನನ್ನು ನೋಡಿ ನಗುವರು."

"ನೀನು ಪ್ರಾಮಿಸ್ ಮಾಡಿದೀಯ"-ಮುಖ ಊದಿಸಿಕೊಂಡಿತು ಮಗು.

ಅಂತೂ ಇಂತೂ ಭರವಸೆಯನ್ನು ಈಡೇರಿಸದಿದ್ದರೆ ಮಗುವಿಗೆ ತಪ್ಪು ಸಂದೇಶ ಕೊಟ್ಟಂತಾಗುವುದೆಂದು ತಂದೆ ಒಪ್ಪಿದ. ಮಗು ಊಟ ಮಾಡಿತು. ತಂದೆ ಮಗುವನ್ನು ಸೆಲೂನಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬಂದ.

ಮರುದಿನ ಬೋಡುತಲೆಯ, ಗುಂಡುಗುಂಡಾಗಿದ್ದ, ಮಗನ ಅರಳು ಕಣ್ಣುಗಳಲ್ಲಿ ಮಿಂಚುತ್ತಿದ್ದ ಸಂತಸವನ್ನು ಕಂಡು ಸಂಭ್ರಾಂತನಾದ. ಶಾಲೆಗೆ ಬಿಡುತ್ತಿದ್ದಂತೆ ಮಗು ಕಾರಿನಿಂದ ಇಳಿದು ತನ್ನಂತೆಯೇ ಬೋಡುತಲೆಯಿದ್ದ ಹೆಣ್ಣುಮಗುವಿನ ಕೈ ಹಿಡಿಯಲು ಓಡಿ ಹೋಯಿತು. ಎರಡು ಮಕ್ಕಳೂ ಜೋರಾಗಿ ಕೇಕೆ ಹಾಕಿ, ನಕ್ಕು ಕೈಹಿಡಿದು ಜೊತೆಯಾಗಿ ಶಾಲೆಯೊಳಕ್ಕೆ ಹೊರಟು ಹೋದವು.ಇನ್ನೊಂದು ಮಗುವಿನ ತಾಯಿ ಈತನಿದ್ದ ಕಡೆಗೆ ಬಂದು-" ಇಂಥ ಮಗುವನ್ನು ಪಡೆದ ನೀವು ಅದೃಷ್ಟಶಾಲಿ" ಎಂದು ಅಭಿನಂದಿಸಿದಳು.

ಅರೆಕ್ಷಣ ವಿಸ್ಮಿತನಾದ ಅವನಿಗೆ "ನನ್ನ ಮಗು ಕ್ಯಾನ್ಸರ್ ಪೀಡಿತೆ. ಕೀಮೋಥೆರಪಿ ಮತ್ತು ರೇಡಿಯೇಶನ್ ನಿಂದಾಗಿ ತಲೆ ಬೋಡಾಗಿದೆ. ಶಾಲೆಗೆ ಬರಲು ಮುಜುಗರ ಪಡುತ್ತಿದ್ದ ಅವಳನ್ನು ಸಂತೈಸಿ ನಿಮ್ಮ ಮಗು "ನಾನೂ ನಿನ್ನಂತೆಯೇ ಆಗುತ್ತೇನೆ, ನಿನಗೆ ಮುಜುಗರವಾಗದು" ಎಂದು ಹೇಳಿ ಕೊಟ್ಟ ಭಾಷೆ ಉಳಿಸಿಕೊಂಡು ಅವಳ ನೆಮ್ಮದಿಗೆ ಕಾರಣನಾಗಿದ್ದಾನೆ. ಇಷ್ಟು ಪುಟ್ಟ ಮಗು ಅವಳ ನೋವನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಅವನ ಮಾತನ್ನು ನಡೆಸಿಕೊಟ್ಟ ನೀವೆಷ್ಟು ವಿಶಾಲ ಹೃದಯಿಗಳು!" ಎಂದಳು.

ಹಿಂದಿನ ದಿನವಷ್ಟೇ ತೊಡೆಯ ಮೇಲೆ ಕೂರು ಹಠ ಮಾಡಿದ ಮಗು, ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಮೀರಿಸಿ ಆಕಾಶದೆತ್ತರ ಬೆಳೆದು ನಿಂತಂತೆ ಭಾಸವಾಯಿತು ಅವನಿಗೆ. ಕಣ್ಣುಗಳು ಆರ್ದ್ರವಾದವು.

ಬಾಲ್ಯವೊಂದು ನಂದನ. ಎಳೆಯ ಮನಸ್ಸುಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅವರು ನೋವಿಗೆ, ಅಸಹಾಯಕತೆಗೆ, ಸ್ನೇಹಕ್ಕೆ, ಪ್ರೀತಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ನಾವು ತೆರೆದುಕೊಳ್ಳಲಾರೆವು. ಅವರು ಕ್ಷಣಾರ್ಧದಲ್ಲಿ ಅಚ್ಚರಿ, ಅಗಾಧತೆಗಳನ್ನು ಸೃಷ್ಟಿಸಿಬಿಡಬಲ್ಲರು. ಅವರ ಮಾತುಗಳನ್ನು ಅಪಹಾಸ್ಯಕ್ಕೀಡು ಮಾಡಿಯೋ, ಹಗುರವಾಗಿಯೋ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನ ದಡ್ಡತನ ಮತ್ತೊಂದಿಲ್ಲ.

ಕೆಲಸದ ಒತ್ತಡಗಳಲ್ಲಿ ಮಕ್ಕಳನ್ನು ಮಾತನಾಡಿಸಲು ಹೊತ್ತಿಲ್ಲವೆಂದು ನಿರಾಕರಿಸುವವರೇ ಬಹಳ ಮಂದಿ. ತುಂಬ ಮಾತನಾಡಬೇಕಾದ ವಯಸ್ಸು ಅದು. ಕಿವಿಯಷ್ಟನ್ನೇ ಅಲ್ಲ, ಮನಸ್ಸು ಕೊಟ್ಟು ಆಲಿಸಬೇಕಾದದ್ದು ಹಿರಿಯರೆಲ್ಲರ ಆದ್ಯ ಕರ್ತವ್ಯ...🙏

Friday, September 25, 2015

ಅಮ್ಮನ ಎಂಟು ಸುಳ್ಳುಗಳು

ಡಾ. ಮುಸ್ತಫಾ ಅರಾದ್ ಬರೆದ ಅಮ್ಮನ ಎಂಟು ಸುಳ್ಳುಗಳು ಎಂಬ ಅರಬಿ ಪದ್ಯದ ಸಾರಾಂಶ ಅನುವಾದ ನಿಮಗೆ ನೀಡುತ್ತಿದ್ದೇನೆ....

ಅಮ್ಮನ ಎಂಟು ಸುಳ್ಳುಗಳು:-

ನನ್ನಮ್ಮ ಯಾವಾಗಲೂ ಸತ್ಯ ಹೇಳಿದ್ದಾರೆಯೇ, ಹಾಗೇನೂ ಇಲ್ಲ.
ಎಂಟು ಬಾರಿ ಅವರು ಖಂಡಿತ ಸುಳ್ಳು ಹೇಳಿದ್ದಾರೆ ನನ್ನಲ್ಲಿ,
ಇದು ನನ್ನ ಹುಟ್ಟಿನೊಂದಿಗೆ ಪ್ರಾರಂಭವಾಗುತ್ತದೆ.
ನಾನು ಒಬ್ಬನೇ ಮಗ ಬಡತನ ಬಹಳ ಇತ್ತು
ನಮ್ಮೆಲ್ಲರಿಗೆ ಸಾಕಾಗುವಷ್ಟು ಆಹಾರ ಇರುತ್ತಿರಲಿಲ್ಲ.
ಒಂದು ದಿನ ನಮ್ಮನೆಗೆ ಎಲ್ಲಿಂದಲೋ ಊಟ ಬಂತು
ನಾನು ಬಹಳ ಸಂತೋಷದಿಂದ ತಿನ್ನಲು ತೊಡಗಿದೆ
ಅವಳು ನನಗೆ ತಿನ್ನಿಸುತ್ತಲೇ ಇದ್ದಳು.
ನಾನು ನೋಡಿದೆ
ಅವಳು ತನ್ನ ಬಟ್ಟಲಿನಲ್ಲಿದ್ದ ಊಟವನ್ನೂ
ನನ್ನ ಬಟ್ಟಲಿಗೆ ಸುರಿದಳು
"ಮಗು ಈ ಊಟ ನೀನು ತಿನ್ನು ನನಗೆ ಹಸಿವಿಲ್ಲ"
ಇದು ಆಕೆಯ ಮೊದಲ ಸುಳ್ಳಾಗಿತ್ತು.

ನಾನು ಸ್ವಲ್ಪ ದೊಡ್ಡವನಾದಾಗ ವಿೂನು ಹಿಡಿಯಲು ಹೋದೆ.
ಚಿಕ್ಕ ನದಿಯಲ್ಲಿ ಎರಡು ವಿೂನು ನನಗೆ ಸಿಕ್ಕಿತು
ಮನೆಗೆ ಬಂದು ಊಟಕ್ಕೆ ಕುಳಿತಾಗ ಎರಡೂ ವಿೂನು ನನ್ನ ಮುಂದಿತ್ತು
ನಾನು ಸಂತೋಷದಿಂದ ತಿನ್ನಲು ತೊಡಗಿದೆ.
ಅಮ್ಮ ಕೇವಲ ಮುಳ್ಳನ್ನು ಚೀಪುತ್ತಿದ್ದಳು.
ನಾನು ಇದನ್ನು ನೋಡಿ ಊಟವನ್ನು ನಿಲ್ಲಿಸಿದಾಗ
ಆಕೆ ಹೇಳಿದಳು,
"ಮಗಾ, ವಿೂನಿನ ಮಾಂಸ ನನಗೆ ಇಷ್ಟವಲ್ಲ ಎಂಬುದು ನಿನಗೆ ತಿಳಿದೇ ಇದೆ"
ಇದು ಆಕೆಯ ಎರಡನೇ ಸುಳ್ಳಾಗಿತ್ತು.

ನನ್ನ ತಂದೆ ತೀರಿದಾಗ ಆಕೆ ವಿಧವೆ ಆದಳು
ನಾವಿಬ್ಬರೇ ಮನೆಯಲ್ಲಿರುತ್ತಿದ್ದೆವು.
ನಮ್ಮ ಕುಟುಂಬದ ಒಳ್ಳೆಯ ಮನುಷ್ಯ
ನಮಗೆ ಆಹಾರಗಳನ್ನು ನೀಡಿ ಸಹಕರಿಸುತ್ತಿದ್ದರು.
ನಮ್ಮ ನೆರೆಕರೆಯವರು ಹೇಳಿದರು
"ಜೀವನ ಹೀಗೆನೇ ಕಳೆದರೆ ಹೇಗೆ ನೀನು ಆ ವ್ಯಕ್ತಿಯನ್ನು ಮದುವೆಯಾಗು"
ಆದರೆ ನನ್ನ ತಾಯಿ ಆ ಸಂಬಂಧಿಯನ್ನೇ ಮನೆಗೆ ಬರದಂತೆ ಹೇಳಿದರು,
ಮತ್ತು ನೆರೆಕರೆಯವರಲ್ಲಿ ಹೇಳಿದರು,
`ನನಗೆ ಯಾರದೇ ಆಶ್ರಯದ ಮತ್ತು ಯಾರದೇ ಪ್ರೀತಿಯ ಅಗತ್ಯವೇ ಇಲ್ಲ"
ಇದು ನನ್ನ ತಾಯಿಯ ಮೂರನೇ ಸುಳ್ಳಾಗಿತ್ತು.

ನಾನು ದೊಡ್ಡವನಾಗಿ ಶಾಲೆಗೆ ಹೋಗಲು ತೊಡಗಿದೆ
ಅಮ್ಮ ಮನೆಯಲ್ಲಿ ಬಟ್ಟೆ ಹೊಲಿದು ಮನೆಮನೆಗೆ ತೆರಳಿ ಮಾರುತ್ತಿದ್ದಳು,
ರಾತ್ರಿಯಾಗಿತ್ತು ಚಳಿ ಬಹಳ ಇತ್ತು. ಅಮ್ಮ ಇನ್ನೂ ಬರಲಿಲ್ಲ.
ನಾನು ಆಕೆಯನ್ನು ಹುಡುಕುತ್ತಾ ಹೊರ ನಡೆದೆ,
ಅವಳನ್ನು ನೋಡಿದೆ. ಬಟ್ಟೆಯ ಬುಟ್ಟಿಯನ್ನು ಹೊತ್ತುಕೊಂಡು
ಮನೆ ಮನೆ ಬಾಗಿಲು ತಟ್ಟುತ್ತಿದ್ದಳು,
ನಾನು ಹೇಳಿದೆ
ಅಮ್ಮಾ ಬಹಳ ಹೊತ್ತಾಯಿತು ಹೋಗೋಣ
ಚಳಿ ಬೇರೆ ಇದೆ. ಬಾಕಿ ಕೆಲಸ ನಾಳೆ ಮಾಡೋಣ,
ಅವಳು ಹೇಳಿದಳು,
ಮಗಾ ಮನೆಗೆ ಹೋಗು, ಎಷ್ಟು ಚಳಿ ಇದೆ
ನೋಡು ಮಳೆ ಬೇರೆ ಬರುತ್ತಿದೆ.
ನಾನು ಎರಡು ಜೋಡಿ ಬಟ್ಟೆ ಮಾರಿ ಬರುತೇನೆ.
ನನ್ನ ಚಿಂತೆ ಮಾಡಬೇಡ ನಾನು ಚೆನ್ನಾಗಿದ್ದೇನೆ.
ನನಗೆ ಯಾವ ಆಯಾಸವೂ ಇಲ್ಲ.
ಇದು ಆಕೆಯ ನಾಲ್ಕನೇ ಸುಳ್ಳಾಗಿತ್ತು.

ಮತ್ತೆ ಶಾಲೆಯಲ್ಲಿ ಕೊನೆಯ ಪರೀಕ್ಷೆ ಇತ್ತು.
ಅಮ್ಮ ನನ್ನ ಜೊತೆ ಶಾಲೆಗೆ ಬಂದಿದ್ದರು,
ನಾನು ಪರೀಕ್ಷಾ ಕೊಠಡಿಯೊಳಗಿದ್ದೆ.
ಅಮ್ಮ ಹೊರಗೆ ಬಿಸಿಲಲ್ಲಿ ನಿಂತಿದ್ದಳು.
ಬಹಳ ಹೊತ್ತಿನ ಬಳಿಕ ನಾನು ಹೊರ ಬಂದೆ,
ನಾನು ತುಂಬಾ ಖುಷಿಯಲ್ಲಿದ್ದೆ.
ಅಮ್ಮ ಪಾನೀಯ ಬಾಟಲಿ ಖರೀದಿಸಿದ್ದಳು.
ನಾನು ಗುಟುಂ ಗುಟುಂ ಕುಡಿದು ಬಿಟ್ಟೆ.
ನಾನು ಕೃತಜ್ನತಾ ಭಾವದೊಂದಿಗೆ ಆಕೆಯ ಮುಖ ನೋಡಿದೆ.
ಅವಳ ಹಣೆಯಲ್ಲಿ ಬೆವರ ಹನಿಗಳು ಚಲಿಸುತ್ತಿತ್ತು.
ನಾನು ಬಾಟಲಿಯನ್ನು ಮುಂದೆ ಮಾಡಿ,
ಅಮ್ಮಾ ಕುಡಿಯಮ್ಮ ಎಂದೆ.
ಆಕೆ ಹೇಳಿದಳು, ನೀನು ಕುಡಿ ನನಗೆ ಸ್ವಲ್ಪವೂ ಬಾಯಾರಿಕೆ ಇಲ್ಲ.
ಇದು ಆಕೆಯ ಐದನೇ ಸುಳ್ಳಾಗಿತ್ತು.

ಯುನಿವರ್ಸಿಟಿ ವಿದ್ಯಾಭ್ಯಾಸ ಮುಗಿದು ನನಗೆ ನೌಕರಿ ಸಿಕ್ಕಿತು.
ಇನ್ನು ತಾಯಿಗೆ ಆರಾಮ ನೀಡುವ ಕಾಲ ಎಂದು ನಾನು ಭಾವಿಸಿದೆ.
ಈಗ ಆಕೆಯ ಆರೋಗ್ಯ ಹಿಂದಿನಂತಿಲ್ಲ.
ಈಗ ಆಕೆ ಮನೆ ಮನೆಗೆ ಹೋಗಿ ಬಟ್ಟೆ ಮಾರುವುದಿಲ್ಲ.
ಮಾರುಕಟ್ಟೆಯಲ್ಲಿ ನೆಲದ ಮೇಲೆ ತರಕಾರಿ ಮಾರುತ್ತಿದ್ದಳು,
ನನ್ನ ಸಂಬಳದ ಸ್ವಲ್ಪಂಶ ಆಕೆಗೆ ನೀಡಿದಾಗ
ನಯವಾಗಿ ನಿರಾಕರಿಸುತ್ತಾ ಹೇಳಿದಳು,
ಇದನ್ನು ನಿನ್ನ ಬಳಿಯೇ ಇಡು ಮಗಾ,
ನನ್ನ ಜೀವನ ಸಾಗುತ್ತಿದೆ
ನನಗೆ ಸಾಕಾಗುವಷ್ಟು ನಾನು ಗಳಿಸುತ್ತಿದ್ದೇನೆ.
ಇದು ಆಕೆಯ ಆರನೇ ಸುಳ್ಳಾಗಿತ್ತು.

ನಾನು ನೌಕರಿ ಜೊತೆ ಇನ್ನೂ ಕೆಲವು ಡಿಗ್ರಿ ಗಳಿಸಿದೆ.
ನನಗೆ ಭಡ್ತಿಯಾಯಿತು.
ಜರ್ಮನ್ ಕಂಪೆನಿಯಲ್ಲಿ ನಾನು ನೌಕರಿ ಮಾಡುತ್ತಿದ್ದೆ
ಅದರ ಕೇಂದ್ರ ಕಚೇರಿಗೆ ನನ್ನನ್ನು ಕರೆದರು.
ನನ್ನ ಹೊಸ ಜೀವನ ಆರಂಭವಾಯಿತು.
ನಾನು ತಾಯಿಗೆ ಕರೆ ಮಾಡಿ ನನ್ನ ಬಳಿ ಬರಲು ಹೇಳಿದೆ.
ನನಗೆ ಭಾರವಾಗದಿರಲೆಂದು ಆಕೆ ಹೇಳಿದಳು,
ಅಂತಹ ಜೀವನ ಶೈಲಿಯ ಅಭ್ಯಾಸ ನನಗೆ ಇಲ್ಲ ಎಂಬುದು ನಿನಗೆ ತಿಳಿದೇ ಇದೆ.
ನಾನು ಇಲ್ಲಿ ಬಹಳ ಆರಾಮವಾಗಿದ್ದೇನೆ.
ಇದು ಆಕೆಯ ಏಳನೆ ಸುಳ್ಳಾಗಿತ್ತು.

ನಂತರ ಆಕೆ ವೃದ್ಧೆಯಾಗಿ ಆಸ್ಪತ್ರೆ ಸೇರಿದಳು.
ಆಕೆ ಜೀವನ್ಮರಣದ ಘಟ್ಟದಲ್ಲಿದ್ದಳು,
ಈಗ ನಾನು ಆಕೆಯ ಬಳಿ ಇರಬೇಕೆಂದು ಎಂದೆನಿಸಿತು
ಎಲ್ಲವನ್ನೂ ಬಿಟ್ಟು ಆಕೆಯ ಬಳಿ ಸ್ವದೇಶಕ್ಕೆ ಬಂದೆ.
ಆಕೆ ಹಾಸಿಗೆಯಲ್ಲಿದ್ದಳು. ನನ್ನನ್ನು ನೋಡಿದಾಕ್ಷಣ ಮಂದಹಾಸ ಬೀರಿದಳು.
ತುಂಬಾ ದುರ್ಬಲಲಾಗಿದ್ದಳು. ನನಗೆ ಸಹಿಸಲಾಗಲಿಲ್ಲ.
ನನ್ನ ಕಣ್ಣೀರು ಸುರಿಯಲಾರಂಭಿಸಿತು.
ಆದರೆ ಅಮ್ಮ ನನ್ನನು ಸರಿಯಾಗಿ ಅಳಲೂ ಬಿಡಲಿಲ್ಲ.
ಮತ್ತೆ ನನ್ನನ್ನು ನೋಡಿ ಮಂದಹಾಸ ಬೀರಿದಳು.
ಮಗಾ ಅಳಬೇಡ
ನನಗೆ ಯಾವ ನೋವೂ ಅನುಭವಕ್ಕೆ ಬರುತ್ತಿಲ್ಲ
ಎಂದು ಹೇಳಿ ಕಣ್ಣು ಮುಚ್ಚಿದಳು.
ನಂತರ ಆಕೆ ಕಣ್ಣು ತೆರೆಯಲೇ ಇಲ್ಲ.
ಇದು ಆಕೆಯ ಎಂಟನೇ ಸುಳ್ಳು.

ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮಗನಿಗೆ ಅರ್ಪಣೆ

Thursday, September 24, 2015

"ಅಪ್ಪನೆಂಬ ಅದ್ಭುತ"


ಅಮ್ಮನ ಕಂಬನಿ
ಕಂಡಷ್ಟು ನಮಗೆ
ಅಪ್ಪನ ಬೆವರಹನಿ
ಕಾಣುವುದೇ ಇಲ್ಲ..!

ಅಪ್ಪನೆಂದರೆ ನಮ್ಮ
ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ
ಬೇಕಾದ ಕಲ್ಪವೃಕ್ಷ !

ಅಪ್ಪ ಅತ್ತಿದ್ದು..
ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ
ಸಮಚಿತ್ತ ಸರದಾರ !

ಹಬ್ಬ ಸಂತಸಗಳಲಿ
ರೇಷ್ಮೆಸೀರೆ ಹೊಸಬಟ್ಟೆ
ತೊಡಿಸಿ ಸಂಭ್ರಮಿಸುವ
ಅಪ್ಪನುಡುಗೆ ಗಮನಿಸಿದವರಾರು?!

ಧರೆಯ ನಿತ್ಯ ಪೊರೆವ
ಅಂಬರದಂತೆ ತಂದೆ
ಸತಿಸುತರ ಹಗಲಿರುಳು
ಕಾಯ್ವ ವಾತ್ಸಲ್ಯಧಾರೆ !

ಅಮ್ಮನ ಮಡಿಲಿಂದ
ಕೈಹಿಡಿದು ನಮ್ಮನ್ನೆಲ್ಲ
ಹೆಗಲಿಗೇರಿಸಿ ಲೋಕ
ತೋರಿಸಿದ ಮಾರ್ಗದರ್ಶಕ !

ನೋವು-ಬೇವು ನಿರಾಸೆ
ಸಂಸಾರದೊತ್ತಡಗಳ..
ಹಾಲಾಹಲವನೆಲ್ಲ ನುಂಗಿ
ನಗುವ ನೀಲಕಂಠ !

ಅಮ್ಮನೆಂದರೆ ಮಮತೆ !
ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ
ಭವಿಷ್ಯಕಾಗಿ ಬದುಕನೆ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !

Saturday, August 29, 2015

ಮನೆಗೆ ಬಾರವ್ವ ತಂಗಿ ಮನೀಗೆ ಬಾ..ರ


ನನ್ನಕ್ಕ ನೀ ನನಕಿಂತ ಮೊದಲ್ ಹುಟ್ಟಿ ನನ್ ಭಾಗ್ಯ ಬೆಳಗಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ನನ್ನುಂಡಿ ತಗೊಂಡು, ಅಟ್ಟದ ಮೇಲೆ ಕುಂತ್ಕೊಂಡು, ಎಲ್ಲಾನೂ ನುಂಗಿದ್ದು
ನಾ ನೋಡಿ ಕೇಳಿದಾಗ, ತಿಂದಿಲ್ಲ ಅನ್ಕೋಂತ, ನಕ್ಕೊಂಡು ಓಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಸಾಲೀಗೆ ಹೊರಟಾಗ, ಸಣ್ಣಂಗಿ ಉಟ್ಕೊಂಡಾಗ, ನನ್ನಂಗಿ ಹಿಡಿದೆಳದು ಜೋರಾಗಿ ನಕ್ಕಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಅವ್ವ ಸಿಟ್ಟಾಗಿ ಹೊಡ್ಯಾಕ ಬಂದಾಗ,  ಅಡ್ಡ ಬಂದುಳಿಸಿದ್ದು
ಅಳ್ ಬ್ಯಾಡೋ ತಮ್ಮ ಅಂತ ಕಣ್ಣೊರ್ಸಿ ಚಾಕ್ಲೇಟ್ ತಂದ್ ಕೊಟ್ಟಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಸಾಲ್ಯಾಗ ಹೊಡ್ದಾಡಿ ಬಟ್ಟಿ ಕೆಸರು ಮಾಡ್ಕೊಂಡು ಅಳ್ಕೋಂತ ಬಂದಾಗ ನೀ ಸಮಾಧಾನ ಮಾಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಜಾತ್ರಿಗೆ ಹೋದಾಗ,  ಮಂಗ್ಯಾ ನೋಡಿ ಅಂಜಿದಾಗ, ಇಬ್ಬರೂ ಅವ್ತ್ಕೊಂಡಿದ್ದು
ನಾಟ್ಕನ ನೋಡ್ಕೋಂಡು ಇಬ್ಬರೂ ಕುಣಿದಾಡಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಹಗಲೂ ರಾತ್ರಿ ಎದ್ದು,  ಕಣ್ಣು ಕೆಂಪು ಮಾಡ್ಕೊಂಡು, ನನ್ಗ ಮಗ್ಗಿ ಕಲಿಸಿದ್ದು
ತಪ್ಪು ಮಾಡಿದಾಗ ತಿಳಿಸಿ ಹೇಳಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಪಿಯುಸಿ ಪಾಸಾದಾಗ ಕ್ಲಾಸಿಗೆ ಫಸ್ಟ್ ಬಂದಾಗ, ನಿನ್ ಕಣ್ಣು ತುಂಬಿ ಬಂದಿದ್ದು
ಓಣ್ಯಾನವರಿಗೆಲ್ಲಾ ಹೋಳಿಗಿ ಮಾಡಿ ತಿನಿಸಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ನನ್ ಭಾಗ್ಯ ಬೆಳಗಲಿ ಅಂತ ದೇವರ ಹತ್ರ ಬೇಡ್ಕೊಂಡು, ವ್ರತ ಎಲ್ಲಾ ಇಟ್ಟಿದ್ದು
ಕೆಲಸ ನನಗೆ ಸಿಕ್ಕಾಗ, ಎಲ್ಲಾರ್ಗೂ ಸಿಹಿ ಹಂಚಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಮದುಮಗಳಾಗಿ ಹೊಸ್ತಿಲು ದಾಟಿ ಹೋಗುವಾಗ, ಹೊಳ್ಳಿ ಬಂದು ತಬ್ಬಿದ್ದು
ನಿನ್ ಬಿಟ್ಟು ಹ್ಯಾಂಗಿರ್ಲ್ಯೋ ತಮ್ಮ ಅಂದಿದ್ದು
ಇನ್ನೂ ನೆನಪೈತ.. ತಂಗೀ, ಎಲ್ಲಾನೂ ನೆನಪೈ..ತಿ

ಬಾರವ್ವ ತಂಗಿ ಮನೀಗೆ ಬಾ,  ನಿನ್ನ ನೆನಪಾಗತೈತಿ ಮನೀಗೆ ಬಾ

Special gift
Dedicated to All sisters
Please accept Zafar's Khayaali Pulaaw

Thursday, August 20, 2015

ಜೀವನದ ಪ್ರಶ್ನೆ ಪತ್ರಿಕೆ

ರಸೂಲುಲ್ಲಾಹ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಕಿಯಾಮತ್ ದಿನದಂದು ಈ ಐದು ಪ್ರಶ್ನೆಗಳನ್ನು ಉತ್ತರಿಸದೇ ಯಾರೂ ಮುಂದೆ ಸರಿಯಲಾರರು..
1. ನಿನ್ನ ಆಯುಶ್ಯ (ಇಡೀ ಜೀವಮಾನ) ವನ್ನು ಹೇಗೆ ಕಳೆದೆ? 
2. ನಿನಗಿರುವ ಜ್ಞಾನದ ಪ್ರಕಾರ ಎಷ್ಟು ಕಾರ್ಯಗಳನ್ನು ಪೂರೈಸಿದೆ? 
3. ಹಣ ಎಲ್ಲಿಂದ ಗಳಿಸಿದೆ? 
4. ಎಲ್ಲಿ ಖರ್ಚು ಮಾಡಿರುವೆ? 
5. ನಿನ್ನ ಶರೀರವನ್ನು ಯಾವ ಕಾರ್ಯಗಳಿಗಾಗಿ ಸವೆಸಿರುವೆ?                                                               -  ತಿರ್ಮಿಜಿ

ಶ್ರೀಮಂತ ಯಾರು....?


ಒಂದು ದಿನ ಒಂದು ತಾಯಿ ಮತ್ತು ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೇ
ಪಕ್ಕದಲ್ಲಿದ್ದ ಒಂದು ದೊಡ್ಡ ಹೋಟೆಲ್ ಗೆ ಹೋಗಿ ಒಂದು
ಲೋಟ ಹಾಲು ಕೊಡಿ ಎಂದು ಕೇಳಿದರು
ಹೋಟೆಲ್ ನವ 100 ರೂಪಾಯಿ ಆಗುತ್ತೆ ಎಂದನು
ಆಯ್ತು ಕೊಡಿ ಎಂದು ದುಡ್ಡು ಕೊಟ್ಟು ಹಾಲು
ತಗೊಂಡರು...
ಇನ್ನೊಂದು ದಿನ ಇದೇ ತಾಯಿ ಹಾಗೂ ಮಗು ಯಾತ್ರೆ
ಹೋಗುತ್ತಿದ್ದರು
ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು ಅವರು ಅಲ್ಲೆ
ಇದ್ದ ಒಂದು ಸಣ್ಣ ಟೀ ಅಂಗಡಿಗೆ ಹೋಗಿ ಒಂದು ಲೋಟ
ಹಾಲು ಕೇಳಿದರು ಆ ಟೀ ಅಂಗಡಿಯವನು ತುಂಬಾ
ಪ್ರೀತಿಯಿಂದ ಹಾಗೂ ವಾತ್ಸಲ್ಯದಿಂದ ಒಂದು ಲೋಟ
ಹಾಲು ಕೊಟ್ಟನು...
ಆ ತಾಯಿ ಹಾಲಿನ ಬೆಲೆ ಎಷ್ಟು ಅಂತ ಕೇಳಿದರು
ಅದಕ್ಕೆ ಅಂಗಡಿಯವನು, ಮಗು ಕುಡಿದ ಹಾಲಿನ ಬೆಲೆ ನನಗೆ
ಬೇಡ,ಮಕ್ಕಳು ಕುಡಿದ ಹಾಲಿನ ದುಡ್ಡು ನಾನು
ತಗೊಳ್ಳಲ್ಲ...ಹಾಗೂ ಇನ್ನು ಮುಂದಿನ ಯಾತ್ರೆ ಗೆ
ಬೇಕಾದರೆ ನೀವು ಹಾಲು ತಗೊಳ್ಬಹುದು...
ಆ ತಾಯಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು
ಹಾಗಾದರೆ ಶ್ರೀಮಂತ ಯಾರು...?
ಒಬ್ಬ ಮನುಷ್ಯನಿಗೆ ಎಷ್ಟು ಸಂಪಾದನೆ ಮಾಡಿದರೆ ಆಸೆ
ಮುಗಿಯಬಹುದು..?
ಯಾರಿಗೆ ಬೇಕಾಗಿ ಇಷ್ಟೆಲ್ಲಾ ಸಂಪಾದನೆ ಮಾಡುತ್ತಾರೆ
...?
ಎಲ್ಲಿಗೆ ತಗೊಂಡು ಹೋಗ್ಲಿಕ್ಕೆ....?
ಸ್ವ ಅವಶ್ಯಕತೆಗಿಂತ ಜಾಸ್ತಿ ಇರುವ ದುಡ್ಡಿಗೆ ಏನು ಬೆಲೆ...?
ಅದರಿಂದ ನೆಮ್ಮದಿ ಇರುತ್ತಾ ...?
ಯಾರೂ ಇಲ್ಲಿ ಬರುವಾಗ ಏನೂ ತಗೊಂಡು ಬಂದಿಲ್ಲ...
ಹೋಗುವಾಗ ಏನೂ ತಗೊಂಡು ಹೋಗುವುದೂ
ಇಲ್ಲ...

ಬನ್ನಿ ನಾವೆಲ್ಲ ಶ್ರೀಮಂತರಾಗೋಣ. ಹಣದ ಶ್ರೀಮಂತಿಕೆ ಕೆಲವರಿಗೆ ಮಾತ್ರ ಸಾಧ್ಯ ಮನದ ಶ್ರೀಮಂತಿಕೆ ಎಲ್ಲರಿಗೂ ಸಾಧ್ಯ. ..ಶುಭೋದಯ

Tuesday, January 6, 2015

Sakhi Aadmi - ಉದಾರ ದಾನಿ

ಸಖಿ ಆದ್ಮಿ ಅಲ್ಲಾಹ ಸೆ ಕರೀಬ್, ಜನ್ನತ್ ಸೆ ಕರೀಬ್, ಲೋಗೋ ಸೆ ಕರೀಬ್ ಹೋತಾ ಹೈ, (ಔರ್) ಜಹನ್ನಮ್ ಸೆ ದೂರ್ ಹೋತಾ ಹೈ. (ತಿರ್ಮಿದಿ: ೧೯೬೧)